ಜಯಚಾಮರಾಜೇಂದ್ರ ಸೇತುವೆಗೆ ಸಂಪೂರ್ಣ ಸುಣ್ಣ ಬಣ್ಣ
ಶಿವಮೊಗ್ಗ ಸುದ್ದಿ ಮಾಧ್ಯಮದ ಬಿಗ್ ಇಂಪ್ಯಾಕ್ಟ್
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ತೀರ್ಥಹಳ್ಳಿ ಎಂದರೆ ನೆನಪಾಗುವ ತುಂಗಾ ಕಮಾನು ಸೇತುವೆಗೆ ಈ ಬಾರಿ ಕೊನೆಗೂ ಸಂಪೂರ್ಣ ಸುಣ್ಣ ಬಣ್ಣ ಹೊಡೆಯಲಾಗಿದೆ.
ಹೌದು ಕಳೆದ ಮೂರು ವರ್ಷಗಳಿಂದ ಅರ್ಧಂ ಬರ್ಧ ಸುಣ್ಣ ಹೊಡೆಯುತ್ತಿದ್ದ ಕೆಲವು ಅಧಿಕಾರಿಗಳು ಈ ಬಾರಿಯೂ ಅದೇ ರೀತಿಯಲ್ಲಿ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಸಂಪೂರ್ಣ ಸುಣ್ಣ ಬಣ್ಣ ಹೊಡೆಯಲೇಬೇಕೆಂದು ಪಟ್ಟು ಹಿಡಿದು ಸಾರ್ವಜನಿಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿದ್ದು ಶಿವಮೊಗ್ಗ ಸುದ್ದಿ ಮಾಧ್ಯಮ. ವರದಿ ಪ್ರಕಟವಾದ ನಂತರ ಬಹಳ ಚರ್ಚೆಗೆ ಗ್ರಾಸವಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಡಾ. ಸುಂದರೇಶ್, ಹಾಗೂ ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಅವರು ಅಧಿಕಾರಿಗಳಿಗೆ ಸಂಪೂರ್ಣ ಸುಣ್ಣ ಬಣ್ಣ ಹೊಡೆಯಲು ತಾಕೀತು ಮಾಡಿದರು.
ಇದನ್ನು ಓದಿ - ನನ್ನಯ ಗೋಳು ಕೇಳುವರು ಯಾರು..?ಜಯಚಾಮರಾಜೇಂದ್ರ ತುಂಗಾ ಸೇತುವೆ ಅಳಲು!!
ತುಂಗಾ ಕಮಾನು ಸೇತುವೆಗೆ ನಂತರ ಮೇಲ್ಭಾಗಕ್ಕೆ ಸುಣ್ಣ ಬಣ್ಣ ಹೊಡೆಯಲು ಹಾಗೂ ಜಯಚಾಮರಾಜೇಂದ್ರ ಎಂದು ಹೆಸರು ಬರೆಯಲು ಮುಂದೆ ಬಂದಿದ್ದು ಅಭಿನವ ವರ್ಕ್ಸ್ ಶಾಪ್ ಮಾಲೀಕರಾದ ರಾಘವೇಂದ್ರ ಮತ್ತು ತಂಡ. ಇಂದು ಬೆಳಗ್ಗೆಯಿಂದ ಸಂಪೂರ್ಣ ಸುಣ್ಣ ಬಣ್ಣ ಹೊಡೆಯುತ್ತಿದ್ದು ನಾಳೆ ತುಂಗಾ ಕಮಾನು ಸೇತುವೆಗೆ ಜಯಚಾಮರಾಜೇಂದ್ರ ಸೇತುವೆ ಎಂದು ಹೆಸರು ಬರೆಯುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು ವರ್ಷದಿಂದ ಅರ್ಧಂ ಬರ್ಧ ಸುಣ್ಣ ಬಣ್ಣ ಹೊಡೆಯುತ್ತಿದ್ದರಿಂದ ಸಾರ್ವಜನಿಕರು ಸಹ ಬೇಸತ್ತು ಹೋಗಿದ್ದರು. ಆದರೆ ಈ ಬಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಸಂಪೂರ್ಣ ಸುಣ್ಣ ಬಣ್ಣ ಹೊಡೆದಿದ್ದು ಈ ಬಾರಿಯ ಜಾತ್ರೆಗೆ ಮೆರಗು ತಂದಿದೆ.
ಇದನ್ನು ಓದಿ - ಕಳೆದ ಬಾರಿ ಅರ್ಧಂಬರ್ಧ ಸುಣ್ಣ ಬಣ್ಣ ಕಂಡ ತುಂಗಾ ಸೇತುವೆ - ಈ ಬಾರಿ ಸಂಪೂರ್ಣ ಆಗುತ್ತಾ?
ಜೀವದ ಮೇಲಿನ ಆಸೆಯನ್ನು ತೊರೆದು ಅದಕ್ಕೆ ಸುಣ್ಣ ಬಣ್ಣ ಹಾಗೂ ಜಯಚಾಮರಾಜೇಂದ್ರ ಸೇತುವೆ ಎಂದು ಹೆಸರು ಬರೆದು ಅದಕ್ಕೆ ಜೀವ ತುಂಬುವ ರಾಘವೇಂದ್ರ ಅವರಿಗೆ ಸಾರ್ವಜನಿಕರ ಪರವಾಗಿ ಹಾಗೂ ಶಿವಮೊಗ್ಗ ಸುದ್ದಿ ಮಾಧ್ಯಮ ತಂಡದಿಂದ ಹ್ಯಾಟ್ಸಾಫ್
