ತುಂಗಾ ಕಮಾನು ಸೇತುವೆಗೆ ಸಂಪೂರ್ಣ ಸುಣ್ಣ ಬಣ್ಣ
ಬೈಪಾಸ್ ರಸ್ತೆ ಮೂಲಕ ವಾಹನ ಸಂಚಾರ
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮ್ಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ ಜಯಚಾಮರಾಜೇಂದ್ರ ಸೇತುವೆಗೆ ಸಂಪೂರ್ಣ ಸುಣ್ಣಬಣ್ಣ ಹೊಡೆಯುತ್ತಿರುವ ಕಾರಣದಿಂದಾಗಿ
ಕಮಾನು ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು ಬಾಳೆಬೈಲಿನ ಬೈಪಾಸ್ ರಸ್ತೆ ಮೂಲಕ ಕೊಪ್ಪ ರಸ್ತೆಯನ್ನ ಸಂಪರ್ಕಿಸಬಹುದು.
ಸಾರ್ವಜನಿಕರು ಕಮಾನು ಸೇತುವೆಗೆ ಸುಣ್ಣಬಣ್ಣ ಬಳಿಯುತ್ತಿರುವ ಕಾರಣದಿಂದ ದಯವಿಟ್ಟು ಸಹಕರಿಸಲು ಈ ಮೂಲಕ ಮನವಿ ಮಾಡಲಾಗಿದೆ.
