ನನ್ನಯ ಗೋಳು ಕೇಳುವರು ಯಾರು..?ಜಯಚಾಮರಾಜೇಂದ್ರ ತುಂಗಾ ಸೇತುವೆ ಅಳಲು..! Tunga bridge

 ನನ್ನಯ ಗೋಳು ಕೇಳುವರು ಯಾರು..?ಜಯಚಾಮರಾಜೇಂದ್ರ ತುಂಗಾ ಸೇತುವೆ ಅಳಲು..!

ಕಳೆದ ಬಾರಿ ಅರ್ಧಂಬರ್ಧ ಸುಣ್ಣ ಬಣ್ಣ ಕಂಡ ತುಂಗಾ ಕಮಾನು ಸೇತುವೆ

ಕಣ್ಣು ಮುಚ್ಚಿ ಕುಳಿತ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು..!

ಸಂಪೂರ್ಣ ಬಣ್ಣ ಬಳಿಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ!



ತೀರ್ಥಹಳ್ಳಿ: ತೀರ್ಥಹಳ್ಳಿ - ಕೊಪ್ಪ ರಸ್ತೆಯಲ್ಲಿರುವ ತುಂಗಾ ನದಿಗೆ  ಸರ್. ಎಂ. ವಿಶ್ವೇಶ್ವರಯ್ಯರವರ ತಂತ್ರಜ್ಞಾನದಲ್ಲಿ  ಕಟ್ಟಿರುವ ಶ್ರೀ ಜಯಚಾಮರಾಜೇಂದ್ರ ಕಮಾನು ಸೇತುವೆಯು ಕಳೆದ ಎಳ್ಳಮಾವಾಸ್ಯೆ ಜಾತ್ರೆಯ ವೇಳೆ ಅರ್ಧಂಬರ್ದ ಸುಣ್ಣ ಬಣ್ಣ ಕಂಡಿದ್ದು ಕೇವಲ ಸೇತುವೆಯ ತಡೆಗೋಡೆ ಹಾಗೂ ಅರ್ಧ ಕಾಮಾನಿಗೆ ಮಾತ್ರ ಸುಣ್ಣ ಬಣ್ಣ ಬಳಿಯಲಾಗಿತ್ತು.

ಪ್ರತಿ ವರ್ಷ ಎಳ್ಳಮವಾಸ್ಯೆಯ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸುಣ್ಣ ಬಣ್ಣ ಬಳಿದು ಸಂಬಂಧ ಪಟ್ಟ ಅಧಿಕಾರಿಗಳು ಸೇತುವೆಗೆ ಮೆರಗು ನೀಡುತ್ತಿದ್ದರು.  ತೆಪ್ಪೋತ್ಸವ ಸಮಿತಿಯವರು ಈ ಸೇತುವೆಗೆ ವಿಶೇಷ ರೀತಿಯ ದೀಪಾಲಂಕಾರ ಮಾಡುತ್ತಿದ್ದರು. ಎಳ್ಳಮವಾಸ್ಯೆ ಜಾತ್ರೆಯಲ್ಲಿ ಈ ದೀಪಾಲಂಕಾರ ಮಾಡಿರುವ ಸೇತುವೆಯನ್ನು ನೋಡಲೆಂದೇ ಸಾವಿರಾರು ಜನರು ಬಂದು ಪೋಟೋಗಳನ್ನು ತೆಗೆಯುತ್ತಿದ್ದರು.


ಇದನ್ನು ಓದಿ - ತೀರ್ಥಹಳ್ಳಿಯಲ್ಲಿ ಬೇಜವಾಬ್ದಾರಿ ಲೋಕೋಪಯೋಗಿ ಅಧಿಕಾರಿಗಳು!? ತುಂಗಾ ಕಮಾನು ಸೇತುವೆಗೆ ಸುಣ್ಣ ಬಣ್ಣ ಹೊಡೆಯಲು ಮೀನಾ ಮೇಷ!?


ಆದರೆ ಇತ್ತೀಚೆಗೆ ಎರಡು ಮೂರು ವರ್ಷಗಳಿಂದ ಕಮಾನು ಸೇತುವೆಗೆ ಸುಣ್ಣ ಬಣ್ಣ ಬಳಿಯದೆ ಕೇವಲ  ತಡೆ ಗೋಡೆಗಳಿಗೆ ಮಾತ್ರ ಸುಣ್ಣ ಬಳಿದು ಅಧಿಕಾರಿಗಳು ಸುಮ್ಮನಾಗಿದ್ದು ಈ ಬಾರಿ ಪುರಾಣ ಪ್ರಸಿದ್ಧ ರಾಮೇಶ್ವರ ಜಾತ್ರೆ ಡಿಸೇಂಬರ್ .30, 31 ಹಾಗೂ ಜನವರಿ 1 ರಂದು ವಿಜೃಂಭಣೆಯಿಂದ ಜಾತ್ರೆ ನಡೆಯಲಿದ್ದು  ಈಗಾಗಲೇ ಜಾತ್ರ ಸಮಿತಿ ಕೂಡ ರಚನೆಯಾಗಿದ್ದು ಸಮಿತಿಯ ಎಲ್ಲಾ ಸದಸ್ಯರು  ತಮಗೆ ಕೊಟ್ಟ ಜವಾಬ್ದಾರಿಯನ್ನು  ಈಗಾಗಲೇ ಪ್ರಾರಂಭ ಮಾಡಿದ್ದು ಜಾತ್ರೆಗೆ  ದಿನಗಣನೆ ಕೂಡ ಆರಂಭವಾಗಿದ್ದು ಇನ್ನೂ ಕೇವಲ ಹತ್ತು ದಿನ ಮಾತ್ರ ಬಾಕಿ ಇದೆ 28 ರಿಂದ ಜಾತ್ರೆ ಪ್ರಾರಂಭ  ಸೇತುವೆ ಮೆರಗು ಕಾಣಲು ವಿದ್ಯುತ್ ದೀಪಾಲಂಕಾರ ಲೈಟಿಂಗ್  ಕೂಡ ಆಗಬೇಕು ಆದರೆ ಸೇತುವೆ ಮಾತ್ರ ನನ್ನಯ ಗೋಳು ಕೇಳುವರು ಯಾರು ಎಂದು ಸುಮ್ಮನಾಗಿದೆ.

ಒಂದು ವೇಳೆ ಕಮಾನು ಸೇತುವೆಗೆ ಸಂಪೂರ್ಣ ಬಣ್ಣ ಬಳಿಯದಿದ್ದರೆ ಸ್ಥಳೀಯರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಗಮನಿಸಿ ತೆಪ್ಪೋತ್ಸವದ ದಿನ ಪ್ರೇಕ್ಷಕರ ಕೇಂದ್ರ ಬಿಂದುವಾಗಿರುವ ಈ ತುಂಗಾ ನದಿಯ ಕಮಾನು ಸೇತುವೆಗೆ ಸುಣ್ಣ ಬಣ್ಣ ಬಳಿದು ಈ ಬಾರಿಯಾದರೂ ಸಂಪೂರ್ಣ ಸುಣ್ಣ ಬಣ್ಣ ಹಚ್ಚಿ ಐತಿಹಾಸಿಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸೇತುವೆಗೆ ವಿಶೇಷ ಮೆರಗು ನೀಡಲಿ ಎನ್ನುವುದು ಪಟ್ಟಣದ ಸಾರ್ವಜನಿಕರ ಅಭಿಪ್ರಾಯವಾಗಿದೆ.







Previous Post Next Post