ಆಗುಂಬೆ ಸಮೀಪ ಕಾರು ಅಪಘಾತ - ಸ್ಥಳದಲ್ಲೇ ಓರ್ವ ಸಾವು - ನಾಲ್ವರ ಸ್ಥಿತಿ ಗಂಭೀರ..! Agumbe

ಆಗುಂಬೆ ಸಮೀಪ ಕಾರು ಅಪಘಾತ - ಸ್ಥಳದಲ್ಲೇ ಓರ್ವ ಸಾವು - ನಾಲ್ವರ ಸ್ಥಿತಿ ಗಂಭೀರ..!

ತೀರ್ಥಹಳ್ಳಿ : ಮೆಗ್ಗಾನ್ ಆಸ್ಪತ್ರೆಯಲ್ಲಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳ ಕಾರು ಆಗುಂಬೆ ಸಮೀಪದ ಕೌರಿಹಕ್ಲು  ಬಳಿ ಅಪಘಾತವಾಗಿದ್ದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದರೆ ನಾಲ್ವರ ಸ್ಥಿತಿ ಗಂಭೀರವಾಗಿದೆ..

ರಾಯಚೂರು ಜಿಲ್ಲೆಯ ಚೇತನ್ ( 28) ವರ್ಷ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.. ಒಟ್ಟು 5 ಮೆಡಿಕಲ್ ವಿದ್ಯಾರ್ಥಿಗಳು ಆಗುಂಬೆ ಪ್ರವಾಸಕ್ಕೆ ಬಂದಿದ್ದರು. Xuv 700 ವಾಹನದಲ್ಲಿ ಬರುವಾಗ ನಿದ್ರೆ ಮಂಪರಿನಿಂದ ಈ ಅಪಘಾತ ಆಗಿರಬಹುದು ಎಂಬುದಾಗಿ ಹೇಳಲಾಗುತ್ತಿದೆ.. ಗಂಭೀರ ಗಾಯಗೊಂಡ ನಾಲ್ವರನ್ನು ಮಣಿಪಾಲಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ..

ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
Previous Post Next Post