ಬೈಕ್ ಮತ್ತು ರಾಜಹಂಸ ಬಸ್ ನಡುವೆ ಅಪಘಾತ- ಯುವಕ ಸ್ಥಳದಲ್ಲೇ ಸಾವು..! tth

ಬೈಕ್ ಮತ್ತು ರಾಜಹಂಸ ಬಸ್ ನಡುವೆ ಅಪಘಾತ- ಯುವಕ ಸ್ಥಳದಲ್ಲೇ ಸಾವು..!

ತೀರ್ಥಹಳ್ಳಿ : ಬೈಕ್ ಹಾಗೂ ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ನಡೆದಿದೆ.

ಪುನೀತ್  (26 ವರ್ಷ) ಮೃತಪಟ್ಟ ಯುವಕ. ರಂಜದಕಟ್ಟೆ ಸಮೀಪದ ಮೀನುಗುಂದ ಗ್ರಾಮದ ಯುವಕ ಕುರುವಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ತಡ ರಾತ್ರಿ ಅಪಘಾತ ನಡೆದಿದೆ. 

ನಿನ್ನೆ ರಾತ್ರಿ ವಿನಾಯಕ ಚಿತ್ರಮಂದಿರದಲ್ಲಿ ಡೆವಿಲ್ ಚಿತ್ರದ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದ. ಸಂಭ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ.
ಅಪಘಾತ ಆದಾಗ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನೆ ಮಾಡುವ ಮೊದಲೇ ಯುವಕ ಸಾವನ್ನಪ್ಪಿದ್ದಾನೆ.  ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Previous Post Next Post