ಕಳೆದ ಬಾರಿ ಅರ್ಧಂಬರ್ಧ ಸುಣ್ಣ ಬಣ್ಣ ಕಂಡ ತುಂಗಾ ಸೇತುವೆ - ಈ ಬಾರಿ ಸಂಪೂರ್ಣ ಆಗುತ್ತಾ? Tunga bridge

ಕಳೆದ ಬಾರಿ ಅರ್ಧಂಬರ್ಧ ಸುಣ್ಣ ಬಣ್ಣ ಕಂಡ ತುಂಗಾ ಸೇತುವೆ - ಈ ಬಾರಿ ಸಂಪೂರ್ಣ ಆಗುತ್ತಾ?
ತೀರ್ಥಹಳ್ಳಿ: ತೀರ್ಥಹಳ್ಳಿ - ಕೊಪ್ಪ ರಸ್ತೆಯಲ್ಲಿರುವ ತುಂಗಾ ನದಿಗೆ  ಸರ್. ಎಂ. ವಿಶ್ವೇಶ್ವರಯ್ಯರವರ ತಂತ್ರಜ್ಞಾನದಲ್ಲಿ  ಕಟ್ಟಿರುವ ಶ್ರೀ ಜಯಚಾಮರಾಜೇಂದ್ರ ಕಮಾನು ಸೇತುವೆಯು ಕಳೆದ ಎಳ್ಳಮಾವಾಸ್ಯೆ ಜಾತ್ರೆಯ ವೇಳೆ ಅರ್ಧಂಬರ್ದ ಸುಣ್ಣ ಬಣ್ಣ ಕಂಡಿದ್ದು ಕೇವಲ ಸೇತುವೆಯ ತಡೆಗೋಡೆ ಹಾಗೂ ಅರ್ಧ ಕಾಮಾನಿಗೆ ಮಾತ್ರ ಸುಣ್ಣ ಬಣ್ಣ ಬಳಿಯಲಾಗಿತ್ತು.

ಪ್ರತಿ ವರ್ಷ ಎಳ್ಳಮವಾಸ್ಯೆಯ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸುಣ್ಣ ಬಣ್ಣ ಬಳಿದು ಸಂಬಂಧ ಪಟ್ಟ ಅಧಿಕಾರಿಗಳು ಸೇತುವೆಗೆ ಮೆರಗು ನೀಡುತ್ತಿದ್ದರು.  ತೆಪ್ಪೋತ್ಸವ ಸಮಿತಿಯವರು ಈ ಸೇತುವೆಗೆ ವಿಶೇಷ ರೀತಿಯ ದೀಪಾಲಂಕಾರ ಮಾಡುತ್ತಿದ್ದರು. ಎಳ್ಳಮವಾಸ್ಯೆ ಜಾತ್ರೆಯಲ್ಲಿ ಈ ದೀಪಾಲಂಕಾರ ಮಾಡಿರುವ ಸೇತುವೆಯನ್ನು ನೋಡಲೆಂದೇ ಸಾವಿರಾರು ಜನರು ಬಂದು ಪೋಟೋಗಳನ್ನು ತೆಗೆಯುತ್ತಿದ್ದರು.

ಆದರೆ ಇತ್ತೀಚೆಗೆ ಎರಡು ಮೂರು ವರ್ಷಗಳಿಂದ ಕಮಾನು ಸೇತುವೆಗೆ ಸುಣ್ಣ ಬಣ್ಣ ಬಳಿಯದೆ ಕೇವಲ  ತಡೆ ಗೋಡೆಗಳಿಗೆ ಮಾತ್ರ ಸುಣ್ಣ ಬಳಿದು ಅಧಿಕಾರಿಗಳು ಸುಮ್ಮನಾಗಿದ್ದು ಈ ಬಾರಿ ಪುರಾಣ ಪ್ರಸಿದ್ಧ ರಾಮೇಶ್ವರ ಜಾತ್ರೆ ಡಿಸೇಂಬರ್ .30, 31 ಹಾಗೂ ಜನವರಿ 1 ರಂದು ಜಾತ್ರೆ ನಡೆಯಲಿದ್ದು ಜಾತ್ರೆಗೆ ದಿನಗಣನೆ ಆರಂಭವಾಗಿದೆ.

ತೆಪ್ಪೋತ್ಸವದ ದಿನ ಪ್ರೇಕ್ಷಕರ ಕೇಂದ್ರ ಬಿಂದುವಾಗಿರುವ ತುಂಗಾ ನದಿಯ ಕಮಾನು ಸೇತುವೆ ಅರ್ಧಂಬರ್ಧ ಸುಣ್ಣ ಬಣ್ಣ ಬಳಿಯುವ ಬದಲು ಈ ಬಾರಿಯಾದರೂ ಸಂಪೂರ್ಣ ಬಣ್ಣ ಬಳಿದು ಐತಿಹಾಸಿಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸೇತುವೆಗೆ ಮೆರಗು ನೀಡಲಿ ಎನ್ನುವುದು ಪಟ್ಟಣದ ಸಾರ್ವಜನಿಕರ ಅಭಿಪ್ರಾಯವಾಗಿದೆ.




Previous Post Next Post