ಊಟ ಹಾಕಿ ಅಂತ ಬಂದ - ಮೊಬೈಲ್ ಕದ್ದು
ಪರಾರಿಯಾದ - ಆಮೇಲೆ ಆಗಿದ್ದೇನು?
ತೀರ್ಥಹಳ್ಳಿ : ತನಗೆ ತುಂಬಾ ಸುಸ್ತಾಗಿದೆ, ಹಸಿವಾಗ್ತಿದೆ ಊಟ ಹಾಕಿ ಎಂದು ಮನೆಯೊಂದರಲ್ಲಿ ಕೇಳಿ ಆ ನಂತರ ಊಟ ಮಾಡಿ ವಾಪಾಸ್ ಹೋಗುವಾಗ ಮನೆಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾದ ಘಟನೆ ತೀರ್ಥಹಳ್ಳಿಯ ರಥಬೀದಿಯಲ್ಲಿ ನಡೆದಿದೆ..
ರಥಬೀದಿಯ ಮನೆಯೊಂದಕ್ಕೆ ಊಟದ ಸಮಯದಲ್ಲಿ ಓರ್ವ ವ್ಯಕ್ತಿ ಬಂದು ತನಗೆ ಊಟ ಹಾಕಿ ಎಂದು ಕೇಳಿದ್ದಾನೆ.. ಇದನ್ನು ನಂಬಿದ ಮನೆಯವರು ಆತನನ್ನು ಒಳಗೆ ಕರೆದು ಊಟ ಹಾಕಿದ್ದಾರೆ.. ಆದರೆ ಆತ ವಾಪಾಸ್ ಆಗುವಾಗ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.. ಅನ್ನ ತಿಂದ ಮನೆಗೆ ಕನ್ನ ಹಾಕಿದ ಎಂಬಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ..
ತುಂಬಾ ಸಮಯದ ನಂತರ ಮೊಬೈಲ್ ಇಲ್ಲದೆ ಇರುವುದು ತಿಳಿದು ಕಳ್ಳತನ ಆಗಿದೆ ಎಂಬುದಾಗಿ ತಿಳಿದು ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.. ಕೂಡಲೇ ತನಿಖೆ ನಡೆಸಿದ ಪೊಲೀಸರು ಖತರ್ನಾಕ್ ಕಳ್ಳನನ್ನು ಹಿಡಿದಿದ್ದಾರೆ.. ಮಾಳೂರು ವ್ಯಾಪ್ತಿಯಲ್ಲಿ ಮೊಬೈಲ್ ಮಾರಾಟ ಮಾಡಲು ಹೋಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.. ಮೊಬೈಲ್ ಮತ್ತೆ ಮನೆಯವರ ಕೈ ಸೇರಿದೆ..