ಕೊರೊನಾ ವ್ಯಾಕ್ಸಿನೇಷನ್‌ ನಿಂದ ಹೃದಯಾಘಾತ ಸಂಭವಿಸುತ್ತಿಲ್ಲ - ಡಾ.ಚಂದ್ರಶೇಖರ್ Helth camp

ಕೊರೊನಾ ವ್ಯಾಕ್ಸಿನೇಷನ್‌ ನಿಂದ ಹೃದಯಾಘಾತ ಸಂಭವಿಸುತ್ತಿಲ್ಲ - ಡಾ.ಚಂದ್ರಶೇಖರ್


ತೀರ್ಥಹಳ್ಳಿ : ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ರೀತಿಯ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದು ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಮುಖ್ಯ ವೈದ್ಯಾಧಿಕಾರಿಯಾದ ಚಂದ್ರಶೇಖರ್ ರವರು ತಿಳಿಸಿದರು. 

ಭಾನುವಾರ ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದರು.

ತಿಂಗಳಿಗೊಮ್ಮೆಯಾದರೂ ನಮ್ಮ ಆಸ್ಪತ್ರೆಯ ವತಿಯಿಂದ ಈ ರೀತಿಯ ಆರೋಗ್ಯ ಶಿಬಿರವನ್ನು ನಡೆಸುತ್ತಿದ್ದೇವೆ. ಪ್ರತಿಯೊಬ್ಬರು ಮೂವತ್ತು ವರ್ಷವಾದ ನಂತರ ತಮ್ಮ ಜೀವನ ಶೈಲಿಯಲ್ಲಿ ಬದಲಾಗುವ ಆರೋಗ್ಯದ ಏರಿಳಿತ ವನ್ನು ಪರೀಕ್ಷಿಸಕೊಳ್ಳಬೇಕು. ಕ್ಯಾನ್ಸರ್ ಸೇರಿದಂತೆ ಇತರ ಯಾವುದೇ ಮಾರಕ ರೋಗಗಳೂ ಕೂಡ ಆರೋಗ್ಯ ಶಿಬಿರದಲ್ಲಿ ಪರೀಕ್ಷೆ ಮಾಡಿಸಿದಾಗ ತಿಳಿದುಬರುತ್ತದೆ. ಆಗ ನಮಗೂ ಸಹ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರವಾಗುತ್ತದೆ ಎಂದರು. 


ಪಟ್ಟಣ ಪಂಚಾಯತಿ ವತಿಯಿಂದ ವರ್ಷಕ್ಕೆ ಒಮ್ಮೆಯಾದರೂ ಇಂತಹ ಆರೋಗ್ಯ ಶಿಬಿರವನ್ನು ನಡೆಸುವುದು ಒಳ್ಳೆಯದು. ನಮ್ಮಲ್ಲಿ ಆರೋಗ್ಯದಲ್ಲಿ ಏರುಪೇರಾಗಲು ನಮ್ಮ ಜೀವನ ಶೈಲಿಯ ಆಹಾರ ವಿಧಾನವೂ ಕೂಡ ಒಂದು. ಧೂಮಪಾನ ಮದ್ಯಪಾನದಂತಹ ದುಶ್ಚಟಗಳಿಂದಲೂ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ. ಹದಿನಾರು ವರ್ಷಕ್ಕೆ ಹೃದಯಾಘಾತವಾಗುವದನ್ನು ನೋಡುತ್ತಿದ್ದೇವೆ. ಅದಕ್ಕೆ ಮುಖ್ಯವಾದ ಕಾರಣ ನಮ್ಮ ಜೀವನ ಶೈಲಿ ಹಾಗೂ ಅತಿಯಾದ ಧೂಮಪಾನ ಎಂದರು . 




ಕೊರೊನಾ ವ್ಯಾಕ್ಸಿನೇಷನ್‌‌ನಿಂದ ಯಾವುದೇ ಕಾರಣಕ್ಕೂ ನಮ್ಮ ಆರೋಗ್ಯಕ್ಕೆ ತೊಂದರೆಯಾಗಿಲ್ಲ. ಕೊರೊನಾ ವ್ಯಾಕ್ಸಿನೇಷನ್‌ ನಿಂದ ಹೃದಯಾಘಾತ ಸಂಭವಿಸುತ್ತಿಲ್ಲ. ಕೊರೊನಾ ವ್ಯಾಕ್ಸಿನೇಷನ್‌ ಗೂ ಹೃದಯಾಘಾತ ಕ್ಕೂ ಸಂಬಂಧವಿಲ್ಲ. ಸರ್ಕಾರ ಅಂದು ವ್ಯಾಕ್ಸಿನ್ ನೀಡದೇ ಇದ್ದಿದ್ದರೇ ಲಕ್ಷಾಂತರ ಮಂದಿಯ ಸಾವನ್ನು ನೋಡಬೇಕಾಗುತ್ತಿತ್ತು ಎಂದು ಹೇಳಿದರು. ತೀರ್ಥಹಳ್ಳಿಯಲ್ಕಿ ಇಂದು ನಡೆದ ಶಿಬಿರದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು ಎಂಟು ನೂರಕ್ಕೂ ಅಧಿಕ ಜನರು ಈ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದು ಇದಕ್ಕೆ ಪಟ್ಟಣ ಪಂಚಾಯತಿಯವರ ಸಹಕಾರ ಕೂಡ ಹೆಚ್ಚಾಗಿದೆ ಎಂದು ತಿಳಿಸಿದರು.



Previous Post Next Post