ತೀರ್ಥಹಳ್ಳಿ ತುಂಗಾ ನದಿಯಲ್ಲಿ ಹೆಣ್ಣು ಬ್ರೂಣ ಪತ್ತೆ..!
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಹೆಣ್ಣು ಮಗುವಿನ ಬ್ರೂಣ ಪತ್ತೆಯಾಗಿದೆ.. ಚೀಲದ ಒಳಗೆ ಕಟ್ಟಿಹಾಕಿ ಬ್ರೂಣವನ್ನು ಹಾಕಿರುವ ಶಂಕೆ ವ್ಯಕ್ತವಾಗಿದೆ.. ಬಕ್ಲಾಪುರ ಸಮೀಪದ ಗಂಗಾದೇವಿಯ ಕಟ್ಟೆ ಬಳಿ ಹೆಣ್ಣು ಮಗುವಿನ ಬ್ರೂಣ ಪತ್ತೆಯಾಗಿದೆ..
ಮಗುವಿನ ಹೊಕ್ಕುಳ ಬಳ್ಳಿ ಸಹ ಕಡಿತ ಮಾಡಿಲ್ಲ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.. ಅಷ್ಟೇ ಅಲ್ಲದೆ ಇಂದು ಹುಟ್ಟಿರುವ ಮಗು ಇರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.. ನದಿಗೆ ಎಸೆದಿದ್ದು ಹೇಗೆ? ಅಥವಾ ಬೇರೆ ಕಡೆ ಬಂತಾ? ಎಂಬೆಲ್ಲಾ ಪ್ರಶ್ನೆಗಳು ಉದ್ದವಾಗಿದೆ
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..
Tags:
ತುಂಗಾ ನದಿ