ತಾಲೂಕು ಕಚೇರಿಯಲ್ಲಿ ವರ್ಗಾವಣೆ ಆಗದೇ ಇರುವವರ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ ಸಾರ್ವಜನಿಕರು..!
ಬಡ ಅಧಿಕಾರಿಗಳ ಮೇಲೆ ಕೆಂಡಾ ಮಂಡಲರಾಗುವ ಶಾಸಕರಿಗೆ ದರ್ಪ ಮಾಡುವ ಅಧಿಕಾರಿಗಳು ಕಾಣಲ್ವಾ..!?
ತೀರ್ಥಹಳ್ಳಿ : ಕಳೆದ ಒಂದು ವಾರದಿಂದ ತೀರ್ಥಹಳ್ಳಿ ತಾಲೂಕು ಕಚೇರಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದು ಅದರಲ್ಲಿ ಬಹು ಮುಖ್ಯವಾಗಿ ಕಳೆದ 20 ವರ್ಷಗಳಿಂದ ವರ್ಗಾವಣೆ ಆಗದೇ ಇರುವ ಅಧಿಕಾರಿಗಳ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಕೆಲವು ಅಧಿಕಾರಿಗಳು ದರ್ಪ ನಡೆಸುತ್ತಿದ್ದು ಅಂತವರ ವಿಚಾರದಲ್ಲಿ ಶಾಸಕರು ಮೌನ ವಹಿಸಿರುವುದು ಏಕೆ? ಎಂಬ ಪ್ರೆಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.
ಇದನ್ನು ಓದಿ - ತೀರ್ಥಹಳ್ಳಿ ತಾಲೂಕು ಕಚೇರಿ ಈಗ ಲಂಚಕೋರರ ಕಚೇರಿ ಆಯ್ತಾ..!?
ಈಗ ಆ ವಿಚಾರದಲ್ಲಿ ಮತ್ತೊಂದು ಮಹತ್ವದ ದಾಖಲೆ ಸಿಕ್ಕಿದ್ದು ತಾಲೂಕಿನ ಸಾರ್ವಜನಿಕರು ಸಹಿ ಮಾಡಿ ಲೋಕಾಯುಕ್ತಕ್ಕೆ ಪ್ರೆಶ್ನೆ ಜೊತೆಗೆ ಮಾಹಿತಿ ಕೇಳಿದ್ದಾರೆ. ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು 7-5-2005 ರಿಂದ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ ವರ್ಗಾವಣೆ ಆಗಿಲ್ಲ. ಅಷ್ಟೇ ಅಲ್ಲದೆ ಸಾರ್ವಜನಿಕರ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಪಕ್ಕಾಬುಕ್ಕು ( ಹಿಸ್ಸಾ ಸರ್ವೇ ) ಕೆಲವು ಅದಲು ಬದಲು ಆಗಿರುವುದು ಕಂಡು ಬಂದಿರುತ್ತದೆ.
ಹಾಗಾಗಿ ತಪಾಸಣೆ ಮಾಡಿದರೆ ತಿಳಿಯಬಹುದು ಹಾಗೂ ಇದರಿಂದ ಸಾರ್ವಜನಿಕರಿಗೆ ಒಳ್ಳೆಯದಾಗುತ್ತದೆ. ಎಂಬುದಾಗಿ 20 ಕ್ಕೂ ಹೆಚ್ಚು ಮಂದಿ ಸಹಿ ಮಾಡಿ ಪೊಲೀಸ್ ಉಪ ಅಧಿಕ್ಷಕರು, ಲೋಕಾಯುಕ್ತ ಕಚೇರಿ ಶಿವಮೊಗ್ಗ ಇವರಿಗೆ ಪತ್ರ ಬರೆದಿದ್ದು ಈ ಪತ್ರ ಈಗ ಶಿವಮೊಗ್ಗ ಸುದ್ದಿ ಮಾಧ್ಯಮಕ್ಕೆ ದೊರಕಿದೆ.
ಈಗಾಗಲೇ ತಾಲೂಕು ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳು ಕೆಲಸ ನಿರ್ವಹಿಸುತ್ತಿರುವ ಬಗ್ಗೆ ವರದಿ ಆಗುತ್ತಿದೆ. ಅದರ ಮಧ್ಯೆ ವರ್ಗಾವಣೆ ಆಗದೇ ದರ್ಪ ತೋರುವ ಅಧಿಕಾರಿಗಳು ಬೇರೆ. ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಆದಾಗ ತಾಲೂಕು ಕಚೇರಿಗೆ ಬರುವ ಶಾಸಕರು ಅಲ್ಲಿ ಬಡಪಾಯಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಹೊರತು ಆದರೆ ಬಡವರ ರಕ್ತ ಹೀರುವ ಅಧಿಕಾರಿಗಳು ಸುಮಾರು 20 ವರ್ಷಗಳಿಂದ ತಾಲೂಕು ಕಚೇರಿಯಲ್ಲೇ ಇದ್ದು ಸಾರ್ವಜನಿಕರ ಕೆಲಸವನ್ನು ಮಾಡಿ ಕೊಡಲು ಸತಾಯಿಸುತ್ತಿದ್ದು ಹಾಗೂ ಲಂಚಕೋರ ಅಧಿಕಾರಿಗಳು ಮಾತ್ರ ಶಾಸಕರಿಗೆ ಕಾಣಿಸಲ್ವಾ? ಎಂಬ ಮಾತು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..
Tags:
ತಾಲೂಕು ಕಚೇರಿ