ಹೊನ್ನೇತಾಳು ಸರ್ಕಾರಿ ಶಾಲೆಗೆ ನೋಟ್ ಬುಕ್ ವಿತರಿಸಿದ ಆದರ್ಶ ಹುಂಚದಕಟ್ಟೆ Note Book

ಹೊನ್ನೇತಾಳು ಸರ್ಕಾರಿ ಶಾಲೆಗೆ ನೋಟ್ ಬುಕ್ ವಿತರಿಸಿದ ಆದರ್ಶ ಹುಂಚದಕಟ್ಟೆ 

ತೀರ್ಥಹಳ್ಳಿ : ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಬೇಕು ಹಾಗೆ ಶಾಲೆಯ ಹೆಚ್ಚಿನ ಅಭಿವೃದ್ಧಿ ಪಡಿಸುವಲ್ಲಿ ನಾನು ಸಹ ಸಹಕರಿಸುತ್ತೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಆದರ್ಶ ಹುಂಚದಕಟ್ಟೆ ಹೇಳಿದರು

ಗುರುವಾರ ಹೊನ್ನೇತಾಳು ಸರ್ಕಾರಿ ಶಾಲೆಗೆ ನೋಟು ಬುಕ್ ವಿತರಣೆ ಕಾರ್ಯಕ್ರಮಕ್ಕೆ ಆದರ್ಶ್ ಹುಂಚದಕಟ್ಟೆ  ಆಗಮಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿ ಹೊಂದಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನೀಡ್ ಬೇಸ್ ಸಂಸ್ಥೆಯ ವತಿಯಿಂದ ನೀಡಲಾದ ನೋಟ್ ಬುಕ್ ವಿತರಣೆ ಮಾಡಿದರು.

ಹೊಸೂರು ಗುಡ್ಡೆಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ
ಶಶಾಂಕ್ ಹೆಗಡೆ ಹೊನ್ನೇತಾಳು ಶಾಲೆ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಶಶಾಂಕ್ ಹೆಗಡೆ ಹಿಂದೆಯೂ ಸಹ ಹೊನ್ನೇತಾಳು ಸರ್ಕಾರಿ ಶಾಲೆಗೆ ಸಹಕಾರ ನೀಡಿದ್ದರು.. 

ಈ ಕಾರ್ಯಕ್ರಮದಲ್ಲಿ ಸಂದೀಪ್ ಗಾಡ್ರ ಗದ್ದೆ ಮತ್ತು ಸಂತೃಪ್ತ ಹೆಗಡೆ ಭಾಗವಹಿಸಿದ್ದರು.  ನೋಟ್ ಬುಕ್ ಗಳನ್ನು ಶಾಲೆಗೆ ಒದಗಿಸಿಕೊಟ್ಟ ಎಲ್ಲರಿಗೂ ಶಾಲಾ ಬಳಗ , SDMC ಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಧನ್ಯವಾದವನ್ನು ತಿಳಿಸಿದ್ದಾರೆ.









Previous Post Next Post