ತಾಲೂಕು ಕಚೇರಿಯಲ್ಲಿ 20 ವರ್ಷಗಳಿಂದ ಇರುವ ಅಧಿಕಾರಿಗಳ ವರ್ಗಾವಣೆ ಏಕಿಲ್ಲ..!? ಪ್ರಶಾಂತ್ ಕುಕ್ಕೆ ಪ್ರೆಶ್ನೆ..!?
ತೀರ್ಥಹಳ್ಳಿ : ತಾಲೂಕು ಕಚೇರಿಯ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿಷ್ಠಾವಂತ ವೈದ್ಯರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಸರ್ಕಾರ
ಕಳೆದ 20 ವರ್ಷಗಳಿಂದ ತಾಲೂಕು ಕಚೇರಿಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದೇ ಇರಲು ಕಾರಣವೇನು? ಎಂಬುದಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಪ್ರೆಶ್ನೆ ಮಾಡಿದ್ದಾರೆ.
ತಾಲೂಕು ಕಚೇರಿಯಲ್ಲಿ ವರ್ಗಾವಣೆ ಆದರೂ ಸಹ ತಮ್ಮ ಪ್ರಭಾವ ಬಳಸಿ ಆರು ತಿಂಗಳ ಒಳಗಾಗಿ ವಾಪಾಸ್ ಬರುತ್ತಿದ್ದಾರೆ. ಕೆಲವು ಅಧಿಕಾರಿಗಳು ದಾಖಲೆಗಳನ್ನು ತಿದ್ದಿ, ಬಡವರ ಖಾಲಿ ಜಾಗದ ಮೇಲೆ ಕಣ್ಣು ಹಾಕಿರುವುದು, ನಂತರ ಲೇಔಟ್ ಮಾಡುವುದು ಈ ರೀತಿಯಾದ ಕೆಲವು ಘಟನೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೆ ತಾಲೂಕು ಕಚೇರಿಯಲ್ಲೂ ಕೆಲವು ತಿದ್ದುಪಡಿಯ ಕೆಲಸಗಳು ಅಧಿಕಾರಿಗಳಿಂದ ನಡೆಯುತ್ತಿದೆ.
ಈಗಾಗಲೇ ಈ ವಿಚಾರವಾಗಿ ನಮ್ಮ ಶಾಸಕರಾದ ಆರಗ ಜ್ಞಾನೇಂದ್ರರವರು ಹೋರಾಟಕ್ಕೆ ಇಳಿದಿದ್ದಾರೆ. ರೈತರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು, ಲಂಚ ಪಡೆಯುವುದನ್ನು ನಿಲ್ಲಿಸಬೇಕು. ತಾಲೂಕು ಕಚೇರಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆದರೂ ಶಾಸಕರಿಗೆ ತಿಳಿಸಬೇಕೆಂದು ಹೇಳಿದ್ದಾರೆ. ಸಾರ್ವಜನಿಕರಿಗೆ ಅಧಿಕಾರಿಗಳಿಂದ ತೊಂದರೆ ಆಗಿದ್ದು ತಿಳಿದು ಬಂದರೆ ಬಿಜೆಪಿ ಪಕ್ಷ ಹೋರಾಟ ಮಾಡುತ್ತದೆ ಎಂಬ ಎಚ್ಚರಿಕೆಯನ್ನು ಕುಕ್ಕೆ ಪ್ರಶಾಂತ್ ನೀಡಿದ್ದಾರೆ....
Tags:
ತಾಲೂಕು ಕಚೇರಿ