ಬಾಳೆಬೈಲು ಬಳಿ ಭೀಕರ ಅಪಘಾತ- ಇಬ್ಬರ ದುರ್ಮರಣ..
ತೀರ್ಥಹಳ್ಳಿ : ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ತಡ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಳೆಬೈಲು ಸಮೀಪ ನಡೆದಿದೆ.
ಪಟ್ಟಣದ ಬಾಳೆಬೈಲಿನ ಆರ್ ಎಂ ಸಿ ಯಾರ್ಡ್ ಬಳಿ ತಡ ರಾತ್ರಿ 1:30 ರ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ
ಬೈಕ್ ನಲ್ಲಿದ್ದ ಇಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಸುದೀಪ್ ( 25) ಮತ್ತು
ಸುಧೀಶ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದೆ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
ಇಬ್ಬರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..
Tags:
ಅಪಘಾತ ಸುದ್ದಿ