ಬೆಕ್ಕಿನ ವಿಚಾರಕ್ಕೆ ಗಲಾಟೆ ! ಪೊಲೀಸರ ಎದುರೇ ಡಿಶುಮ್ ಡಿಶುಮ್..! Agumbe

ಬೆಕ್ಕಿನ ವಿಚಾರಕ್ಕೆ ಗಲಾಟೆ !  ಪೊಲೀಸರ ಎದುರೇ ಡಿಶುಮ್ ಡಿಶುಮ್..!

ತೀರ್ಥಹಳ್ಳಿ :  ಮಲೆನಾಡಿನಲ್ಲಿ ಬೇಲಿ ಜಗಳ ಎನ್ನುವುದು ಮಾಮೂಲಿ, ಆದರೆ ಬೆಕ್ಕಿಗಾಗಿ ಗಲಾಟೆ ಅಷ್ಟೇ ಅಲ್ಲದೆ ಹೊಡೆದಾಟ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ..

ಒಂದು ಮನೆಯ ಹೆಣ್ಣು ಬೆಕ್ಕನ್ನು ಹುಡುಕಿಕೊಂಡು ಪಕ್ಕದ ಮನೆಯ ಗಂಡು ಬೆಕ್ಕು ಹೋಗಿದ್ದೆ ಈ ರಂಪಾಟಕ್ಕೆ ಕಾರಣ. ನಿಮ್ಮ ಬೆಕ್ಕು ನಮ್ಮ ಮನೆಗೆ ಬರದಂತೆ ನೋಡ್ಕೊಳ್ಳಿ ಅಂದಿದ್ದಕ್ಕೆ, ಶುರುವಾದ ಜಗಳ ನಂತರ ವಿಕೋಪಕ್ಕೆ ಹೋಗಿದೆ.. ನಂತರ ತಳ್ಳಾಟ, ನೂಕಾಟ ಆರಂಭವಾಗಿದೆ. ಗಲಾಟೆ ಜೋರಾಗುತ್ತಿದ್ದಂತೆ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ.. ಆದರೆ 
ಪೊಲೀಸರು ಸ್ಥಳಕ್ಕೆ ಬಂದು ಮಹಜರು ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಕಡೆಯವರು ಡಿಶುಮ್ ಡಿಶುಮ್ ಎಂದು ಹೊಡೆದಾಡಿಕೊಂಡಿದ್ದಾರೆ..

ಎರಡು ಕಡೆಯವರಿಗೂ ಪೆಟ್ಟಾಗಿದ್ದು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿಯವರೆಗೆ ಜಾಗಕ್ಕೆ ಹೊಡೆದಾಟ ನಡೆಸುತ್ತಿದ್ದ ಜನ ಈಗ ಬೆಕ್ಕಿಗೂ ಜಗಳ ಮಾಡುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.. ಈ ವಿಚಿತ್ರ ಪ್ರಕರಣ ಆಗುಂಬೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ..
Previous Post Next Post