ರಂಜಕಟ್ಟೆಯಲ್ಲಿ ಅಡಿಕೆ ಮೂಟೆ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ.! Thift

ರಂಜಕಟ್ಟೆಯಲ್ಲಿ ಅಡಿಕೆ ಮೂಟೆ  ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ.!


ತೀರ್ಥಹಳ್ಳಿ : ಮುಳಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯ  ರಂಜದಕಟ್ಟೆಯ ಅಡಕೆ  ವ್ಯಾಪಾರಿಯಾಗಿದ್ದ ಅಶ್ರಫ್ ರವರ ಮನೆಯಲ್ಲಿ ಅಡಿಕೆ ಮೂಟೆಯನ್ನ ಕಳ್ಳತನ ಮಾಡಲಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಜೂ. 4ರಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. 

ಈ ಪ್ರಕರಣವನ್ನು ಬೆನ್ನತ್ತಿದ ತೀರ್ಥಹಳ್ಳಿ ಪೊಲೀಸರು, ಒಂದು ವಾಹನ ಹಾಗೂ ಅಡಿಕೆ ಚೀಲದ ಸಮೇತ ಇಬ್ಬರು ಕಳ್ಳ ರನ್ನ ಬಂಧಿಸಿದ್ದಾರೆ.. ಮೆಹಬೂಬ್ ಸಾಬ್ ಬಿಜಾಪುರ್ s/oದಾದಾಪೀರ್  ಹಾಗೂ ಕಾಸಿಂ ಸಾಬ್ ಬೇಪಾರಿ  s/o ಮಾಬು ಸಾಬ್ ಎಂಬ ಇಬ್ಬರು ಖತರ್ನಾಕ್  ಕಳ್ಳರನ್ನ ಬಂಧಿಸಿದ್ದಾರೆ. ಕಳ್ಳರಿಂದ 9 ಕ್ವಿಂಟಾಲ್ ಅಡಿಕೆ ಚೀಲ 4.50.000 ರೂ  ಕಳ್ಳತನಕ್ಕೆ ಉಪಯೋಗಿಸದ ಅಶೋಕ್ ಲೇಲ್ಯಾಂಡ್ ದೋಸ್ತ್ ಗಾಡಿ 6.00.000  ರೂ ಒಟ್ಟು 10.50.000 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ..

ಶಿವಮೊಗ್ಗ ರಕ್ಷಣಾಧಿಕಾರಿ ನಿಖಿಲ್ ಬಿ ಮಾರ್ಗದರ್ಶನದಲ್ಲಿ  ಅಡಿಷನಲ್ ಎಸ್ ಪಿ ಕಾರ್ಯಪ್ಪ, dysp ಅರವಿಂದ್ ಕಲಗುಜ್ಜಿ ಯವರ ನೇತೃತ್ವದಲ್ಲಿ ಪಿಐ ಇಮ್ರಾನ್ ಬೇಗ್, ಪಿಎಸ್ಐ ಸುಷ್ಮಾ, ಪಿಎಸ್ಐ ಯುವರಾಜ್ , ಎಎಸ್ಐ ಮೀನಾಕ್ಷಿ, Hc ಲಿಂಗೇಗೌಡ HC kumar, Pc manjunath ಹಂಪಿಹೂಳಿ, ಪ್ರದೀಪ್, ಪ್ರಮೋದ್, ವೀರೇಂದ್ರ, ದೀಪಕ್,ರಾಘವೇಂದ್ರ, ಶಿವಮೊಗ್ಗ ಡಿಪಿಒ ಗುರು ಮತ್ತು ಇಂದ್ರೇಶ್ ಸೇರಿ ಹಲವು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು..





Previous Post Next Post