ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ 20 ವರ್ಷದಿಂದ ಇರುವ ಭ್ರಷ್ಟ ಅಧಿಕಾರಿಗಳು..!
ಭ್ರಷ್ಟ ಅಧಿಕಾರಿಗಳಿಗೆ ರಾಜಕೀಯ ಮುಖಂಡರೆ ಸಾಥ್..!?
ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಎಂದ ಶಾಸಕರು ಮೌನ..!
ತೀರ್ಥಹಳ್ಳಿ : ತಾಲೂಕು ಕಚೇರಿ ಸೇರಿ ಹಲವು ಸರ್ಕಾರಿ ಕಚೇರಿಗಳಲ್ಲಿ 20 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಕೆಲವು ಭ್ರಷ್ಟ ಅಧಿಕಾರಿಗಳಿಂದ ಬಡವರ ಕಷ್ಟ ಹೇಳ ತೀರದಾಗಿದೆ. ಬಡವರ ಪಾಲಿನ ಯಮರಾಜರಾಗಿ ಅಧಿಕಾರಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಹಣದ ವ್ಯಾಮೋಹದಿಂದ ಸತ್ತವರನ್ನು ಬದುಕಿಸುವ ಅದ್ಭುತ ಕಾರ್ಯ ವೈಖರಿ ಭ್ರಷ್ಟ ಅಧಿಕಾರಿಗಳಲ್ಲಿ ಇದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇತ್ತೀಚಿಗೆ ಹಾಳಾದ ರಾಜಕೀಯ ವ್ಯವಸ್ಥೆ, ಜಾತಿ ವ್ಯವಸ್ಥೆಯಿಂದ ತಮ್ಮ ಅನುಕೂಲಕ್ಕಾಗಿ, ಕೆಲವು ಅಧಿಕಾರಿಗಳು ಕಳೆದ 20 ವರ್ಷಗಳಿಂದ ಗೂಟ ಹೊಡೆದು ಕುಳಿತಿದ್ದರು ಪ್ರೆಶ್ನೆ ಮಾಡುವ ಅವಕಾಶ ಇಲ್ಲದಂತೆ ಆಗಿದೆ.
ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೇಗಿದೆ ಎನ್ನುವುದಕ್ಕೆ ಉದಾಹರಣೆ 10 ವರ್ಷದ ವ್ಯಕ್ತಿಗೆ ಹಕ್ಕು ಪತ್ರ ಸಿಗುತ್ತದೆ. ಸತ್ತ ವ್ಯಕ್ತಿಯ ಹೆಸರಲ್ಲಿ ನೋಂದಣಿ ಆಗುತ್ತದೆ, ಇಂತಹ ತಂತ್ರಜ್ಞಾನ ಹೊಂದಿರುವ ವಿಚಿತ್ರ ಅಧಿಕಾರಿಗಳು ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಇದ್ದಾರೆ ಎಂದು ನೊಂದ ವ್ಯಕ್ತಿ ತಿಳಿಸಿದ್ದಾರೆ.
ತಮ್ಮದೇ ಜಾಗವಿದ್ದರೂ ಅದನ್ನು ಪಡೆಯಲು ಹರಸಾಹಸ ಮಾಡಬೇಕು, ಲಂಚದ ಆಸೆಯಿಂದ ಹಣ ಇದ್ದವರಿಗೆ ಮಾತ್ರ ಕೆಲಸ ಆಗುತ್ತದೆ. ವರ್ಗಾವಣೆ ಮಾಡಿದರೂ ರಾಜಕೀಯ ಹಾಗೂ ಹಣದಿಂದ ಮತ್ತೆ ಪುನಃ ಬರುತ್ತಾರೆ. ಇಂತಹ ಭ್ರಷ್ಟ ಅಧಿಕಾರಿಗಳನ್ನು ಏನು ಮಾಡಬೇಕು? ಈ ಬಗ್ಗೆ ಉಗ್ರ ಹೋರಾಟ, ಕಚೇರಿ ಎದುರಿಗೆ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ ಶಾಸಕರು ತಮ್ಮ ರಾಜಕೀಯ, ಹಾಗೂ ಅದೇ ಜಾತಿ ವಿಚಾರದಿಂದ ಮೌನ ವಹಿಸಿದ್ದರಾ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಒಟ್ಟಿನಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಜಾಗ ಬೇಕಾದರೆ ತಾಲೂಕು ಕಚೇರಿಯಲ್ಲಿರುವ ಭ್ರಷ್ಟಾಚಾರ ಮಾಡುವ ಅಧಿಕಾರಿಗಳನ್ನು ಸಂಪರ್ಕಿಸಿದರೆ ಒಳ್ಳೆಯ ಜಾಗ ಸಿಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..