ತೀರ್ಥಹಳ್ಳಿ ತಾಲೂಕು ಕಚೇರಿ ಈಗ ಲಂಚಕೋರರ ಕಚೇರಿ ಆಯ್ತಾ..!? Thirthahalli Taluk Offfice

ತೀರ್ಥಹಳ್ಳಿ ತಾಲೂಕು ಕಚೇರಿ ಈಗ ಲಂಚಕೋರರ ಕಚೇರಿ ಆಯ್ತಾ..!?

ಭ್ರಷ್ಟ ಅಧಿಕಾರಿಗಳಿಂದಲೇ ತುಂಬಿರುವ ತಾಲೂಕು ಕಚೇರಿ..! ಸಾರ್ವಜನಿಕರ ಹೇಳಿಕೆ..!

ತೀರ್ಥಹಳ್ಳಿ : ಬಡವರ ಪಾಲಿಗೆ ದೇವಸ್ಥಾನ ಆಗಬೇಕಿದ್ದ ತಾಲೂಕು ಕಚೇರಿ ಈಗ ಭ್ರಷ್ಟ ಅಧಿಕಾರಿಗಳಿಂದ ಲಂಚಕೋರರ ಕಚೇರಿಯಾಗಿ ಮಾರ್ಪಟ್ಟಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.


ಸೋಮವಾರ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ 20 ವರ್ಷದಿಂದ ಇರುವ ಭ್ರಷ್ಟ ಅಧಿಕಾರಿಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಶಿವಮೊಗ್ಗ ಸುದ್ದಿ ವರದಿಯನ್ನು ಮಾಡಿತ್ತು. ಈಗ ಆ ವರದಿಗೆ ಸಾರ್ವಜನಿಕರಿಂದಲೇ ಉತ್ತರಗಳು ಸಿಕ್ಕಿದ್ದು ಹಣ ಇಲ್ಲದಿದ್ದರೆ ಅಲ್ಲಿ ಯಾವುದೇ ಕೆಲಸಗಳು ನಡೆಯುವುದೇ ಇಲ್ಲ. ಒಂದು ಅರ್ಜಿ ಕೊಟ್ಟರೆ ಹಾಗೆ ಹೀಗೆ ಎಂದು ಹೇಳಿ ಸತಾಯಿಸುತ್ತಾರೆ. ಯಾವುದೇ ಅಧಿಕಾರಿಗಳು ಸರಿಯಾಗಿ ಮಾತನಾಡುವುದಿಲ್ಲ, ಫೈಲ್ ಗಳಲ್ಲಿ ದುಡ್ಡು ಇಟ್ಟರೆ ಮಾತ್ರ ಆ ಫೈಲ್ ಮುಂದೆ ಹೋಗುತ್ತೆ ಎಂಬೆಲ್ಲ ದೂರು ಬಂದಿದೆ.



ಇನ್ನು ಸೋಮವಾರ ಸಂಜೆ ತಾಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿನ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶಾಸಕರು ಅಲ್ಲಿನ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಂದಾಗುವ ಪ್ರಯತ್ನ ಯಾಕೆ ಮಾಡಲ್ಲ? ಅಧಿಕಾರಿಗಳ ಜಾತಿ ವಿಚಾರದಿಂದ ಹಾಗೂ ತಮಗೆ ಬರುವ ರಾಜಕೀಯ ಒತ್ತಡದಿಂದ ಸುಮ್ಮನಾಗಿದ್ದಾರಾ? ಆಸ್ಪತ್ರೆ ವೈದ್ಯರನ್ನು ವರ್ಗಾವಣೆ ಮಾಡಿರುವ ರೀತಿ ತಾಲೂಕು ಕಚೇರಿಯ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಾಧ್ಯ ಇಲ್ವಾ? ಎಂಬೆಲ್ಲ ಮಾತುಗಳು ಕೇಳಿ ಬಂದಿದೆ.



ನಿಮಗೂ ತಾಲೂಕು ಕಚೇರಿಯಲ್ಲಿ ತೊಂದರೆ ಆಗ್ತಿದ್ಯಾ? ನಮಗೆ ಮಾಹಿತಿ ನೀಡಿ, ಯಾರೆಲ್ಲ ಭ್ರಷ್ಟ ಅಧಿಕಾರಿಗಳು ಇದ್ದಾರೆ? ಎಷ್ಟು ಲಂಚ ತೆಗೆದುಕೊಳ್ಳುತ್ತಾರೆ ಎಂಬೆಲ್ಲ ಮಾಹಿತಿ ಶೀಘ್ರದಲ್ಲಿ..






Previous Post Next Post