ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ವಿದ್ಯಾರ್ಥಿ ವಿರುದ್ಧ ದಾಖಲಾಯ್ತು ಕೇಸ್‌ Maaluru

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ವಿದ್ಯಾರ್ಥಿ ವಿರುದ್ಧ ದಾಖಲಾಯ್ತು ಕೇಸ್‌..!

ತೀರ್ಥಹಳ್ಳಿ: ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಫೋಟೋವನ್ನು ಸ್ಟೋರಿಯಾಗಿ ಅಪ್‌ಲೋಡ್ ಮಾಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದವಿ ವಿದ್ಯಾರ್ಥಿಯೊಬ್ಬ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗೋಮಾಂಸ ಸ್ವಚ್ಛಗೊಳಿಸುವ ಫೋಟೋ ಪ್ರಕಟಿಸಿದ್ದ. ಈ ಪೋಸ್ಟ್‌ನಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ತಿಳಿದಿದ್ದರೂ ಆತ ಇದನ್ನು ಅಪ್‌ಲೋಡ್ ಮಾಡಿದ್ದನು ಎಂದು ಆರೋಪಿಸಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ್ದವ ಮಂಡಗದ್ದೆಯ ಲಿಂಗಾಪುರದ 19 ವರ್ಷದ ವಿದ್ಯಾರ್ಥಿಯಾಗಿದ್ದು  BCA ವಿದ್ಯಾಭ್ಯಾಸ ಮಾಡುತ್ತಿದ್ದ.. ಈಗ ಈತನ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..




Previous Post Next Post