ಮರಳು ಮಾಫಿಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಪೊಲೀಸರು..! BIG IMPACT

ಮರಳು ಮಾಫಿಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಪೊಲೀಸರು..!

ಶಿವಮೊಗ್ಗ ಸುದ್ದಿ ವರದಿ ಫಲಶ್ರುತಿ 

ತೀರ್ಥಹಳ್ಳಿ : ಪಟ್ಟಣದ ಸಮೀಪದ ಬುಕ್ಲಾಪುರ ಬಳಿ ಇರುವ ಮರಳು ಕ್ವಾರೆಯಿಂದ ಮರಳು ಸಾಗಟ ನಡೆಯುತ್ತಿದ್ದು ಎಗ್ಗಿಲ್ಲದೇ ಮರಳು ಮಾಫಿಯ ನಡೆಯುತ್ತಿದ್ದರು ಸಹ  ತಾಲೂಕು ಆಡಳಿತ ಮೌನ ವಹಿಸಿದ್ದು ಪೊಲೀಸ್ ಇಲಾಖೆಕೂಡ ಕಣ್ಮುಚ್ಚಿ ಕುಳಿತಿದೆ ಎಂದು ಶಿವಮೊಗ್ಗ ಸುದ್ದಿಯಲ್ಲಿ  ವರದಿ ಪ್ರಕಟವಾಗಿತ್ತು.


ವರದಿಯಾದ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ ಪೊಲೀಸ್ ಇಲಾಖೆ ಕ್ವಾರೆ ಯಿಂದ ಹೊರ ಹೋಗುವ ಮರಳು ಸಾಗಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಬೆಳ ಬೆಳಗ್ಗೆ ಮರಳು ಲಾರಿಗಳು ಅಗ್ರಹಾರ ರಸ್ತೆಯಲ್ಲಿ ಓಡಾಟ ನಡೆಸುವ ವೇಳೆ ಶಾಲಾ ವಾಹನಗಳಿಗೂ ಟ್ರಾಫಿಕ್ ಜಾಮ್ ಮಾಡುವುದಲ್ಲದೆ ಅತ್ಯಂತ ವೇಗವಾಗಿ ಮರಳು ಲಾರಿಗಳು ಸಂಚರಿಸುತ್ತದೆ. ಲಾರಿಗಳಿಂದ ಅವಘಡ ಸಂಭವಿಸಿದರೆ ಹೊಣೆ ಯಾರು? ಎಂದು ಪ್ರೆಶ್ನೆ ಮಾಡಲಾಗಿತ್ತು. ಈಗ ತಾತ್ಕಾಲಿಕ ಬ್ರೇಕ್ ಹಾಕಿರುವ ಪೊಲೀಸರು ನಂತರದ ದಿನಗಳಲ್ಲಿ ಶಾಲಾ ಸಮಯದ ವೇಳೆ ಮರಳು ಸಾಗಾಟಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ.




Previous Post Next Post