ಕಾಡಾನೆ ತುಳಿದು ವ್ಯಕ್ತಿ ಸಾವು..!.Eliphant

ಕಾಡಾನೆ ತುಳಿದು ವ್ಯಕ್ತಿ ಸಾವು..!

ಭದ್ರಾವತಿ: ಆನೆ ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭದ್ರಾವತಿ ತಾಲ್ಲೂಕಿನ‌ ಬಂಡೀಗುಡ್ಡದಲ್ಲಿ ನಡೆದಿದೆ.
ಬಂಡಿಗುಡ್ಡ ಗ್ರಾಮದ ಕುಮಾರ್ (50) ಮೃತ ದುರ್ದೈವಿ.

ಬಂಡಿಗುಡ್ಡ ಗ್ರಾಮವು ಕುಗ್ರಾಮವಾಗಿದ್ದು ಅರಣ್ಯದೊಳಗೆ ಇದೆ. ಈ ಭಾಗದಲ್ಲಿ ಒಂಟಿ ಸಲಗವೊಂದು ಸಂಚಾರದಲ್ಲಿದ್ದು ಅದೇ ತುಳಿದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ರಾತ್ರಿ 9.30ರ ಹೊತ್ತಿಗೆ ಘಟನೆ ನಡೆದಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Previous Post Next Post