ತೀರ್ಥಹಳ್ಳಿಯಲ್ಲಿ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ (ರಿ) ವತಿಯಿಂದ ವಿಶ್ವ ಯೋಗ ದಿನಾಚರಣೆ Yoga Day

ತೀರ್ಥಹಳ್ಳಿಯಲ್ಲಿ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ (ರಿ) ವತಿಯಿಂದ ವಿಶ್ವ ಯೋಗ ದಿನಾಚರಣೆ
ತೀರ್ಥಹಳ್ಳಿ : ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ (ರಿ) ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಜೂನ್ 21 ರ ಶನಿವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಬೆಳಿಗ್ಗೆ 6 ರಿಂದ 7.30ರ ವರೆಗೆ ಟಿ.ಎ. ಪಿ.ಸಿ.ಎಂ.ಎಸ್ ಸಭಾ ಭವನದಲ್ಲಿ ಸಾಮೂಹಿಕ ಯೋಗಾಸನ ನಡೆಯಲಿದೆ.. ಯೋಗಾಸನ ಅಭ್ಯಾಸ ಇರುವ ಎಲ್ಲರೂ 10 ನಿಮಿಷ ಮುಂಚಿತವಾಗಿ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

ಜೂ 21 ರ  ಸಂಜೆ 6 ರಿಂದ10 ಘಂಟೆಯ ವರೆಗೆ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ..
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗ ಶಿಕ್ಷಣ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ|| ಜೀವಂಧರ್ ಜೈನ್ ವಹಿಸಲಿದ್ದಾರೆ.. ಮುಖ್ಯ ಅತಿಥಿಗಳಾಗಿ ಆರಗ ಜ್ಞಾನೇಂದ್ರ  ರಹಮತ್ ಉಲ್ಲಾ ಅಸಾದಿ  ಡಿ.ನಾಗರಾಜ್   ಭಾಗ್ಯ ಎಸ್ ಐತಾಳ್  ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಪ್ರಖರ ವಾಗ್ಮಿ, ನಿರೂಪಕ, ಮಾತೃವಂದನಾ ಕಾರ್ಯಕ್ರಮದ ಮೂಲಕ ಜನಪ್ರಿಯರಾದ  ಎನ್.ಆರ್.ದಾಮೋದರ ಶರ್ಮಾ ಇವರು ಆಗಮಿಸಿ ಮಾತೃ ಭೂಮಿ ಭಾರತ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ನಂತರ ಸ್ಥಳೀಯ ಶಾಲಾ ಮಕ್ಕಳು ಮತ್ತು ಸ್ಥಳೀಯ ಯೋಗ ಬಂಧುಗಳಿಂದ  ಯೋಗ ನೃತ್ಯ ಹಾಗೂ ತಾಲೂಕಿನ ಯೋಗ ಪ್ರತಿಭೆಗಳಾದ ಚಿ.ಅಭಿನಂದನ್ ಕೋಟಿಕೊಪ್ಪ ಮತ್ತು ಚಿ.ಅದ್ವೈತ್ ಭಾವಿಕೈಸರು ಇವರಿಂದ ವಿಶೇಷ ಯೋಗಾಸನ ಪ್ರದರ್ಶನ ನಡೆಯಲಿದೆ.



Previous Post Next Post