ನೆಲದ ಮೇಲೆ ಬೇಕಾಬಿಟ್ಟಿಯಾಗಿ ಇಡಲಾದ ಪುಸ್ತಕಗಳು...!!
ವಿದ್ಯಾರ್ಥಿಗಳ ಜೀವನ ರೂಪಿಸುವ ಪುಸ್ತಕದ ಕಥೆ ಅದೋಗತಿ ಮಾಡಿತಾ ಶಿಕ್ಷಣ ಇಲಾಖೆ!?
ಶಿಕ್ಷಣ ಸಚಿವರೇ ನಿಮ್ಮ ಜಿಲ್ಲೆಯಲ್ಲಿ ಇದೆಂತಾ ಕಥೆ!!
ತೀರ್ಥಹಳ್ಳಿ : ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ, ವಿದ್ಯಾರಂಭಮ್ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ಎಂದು ಹೇಳಲಾಗುತ್ತದೆ ಅದರ ಅರ್ಥ ಸರಸ್ವತಿ ದೇವಿಯೇ, ನಿನಗೆ ನನ್ನ ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ! ನೀವು ಎಲ್ಲಾ ಆಸೆಗಳನ್ನು ನೀಡುವವರು. ನಾನು ನನ್ನ ಅಧ್ಯಯನವನ್ನು ಪ್ರಾರಂಭಿಸುತ್ತಿದ್ದೇನೆ,
ಯಶಸ್ಸಿಗೆ ನನ್ನನ್ನು ಆಶೀರ್ವದಿಸಿ ಎಂದು ಪ್ರಾರ್ಥನೆ ಮಾಡಿ ಪುಸ್ತಕ ಓದಲು ಆರಂಭ ಮಾಡಲಾಗುತ್ತದೆ.
ಆದರೆ ವಿದ್ಯಾರ್ಥಿಗಳು ಓದುವ ಪುಸ್ತಕಗಳ ಪಾಡು ಹೇಳತೀರದಾಗಿದೆ. ಹೌದು ತೀರ್ಥಹಳ್ಳಿಯ ಕುವೆಂಪು ಶಾಲೆಯ ಹಿಂಭಾಗ ಇರುವ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಚೇರಿಯ ಪಕ್ಕದಲ್ಲಿರುವ ಕಟ್ಟಡ ಸಂಪೂರ್ಣ ಹಾಳಾಗಿ ಹೋಗಿದ್ದು ಅದರೊಳಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪುಸ್ತಕಗಳನ್ನು ನೆಲದ ಮೇಲೆ ಹಾಕಲಾಗಿದೆ. ಅದರಲ್ಲೂ ಪುಸ್ತಕಗಳು ಸಂಪೂರ್ಣ ಧೂಳಿನಿಂದ ಮುಚ್ಚಿ ಹೋಗಿದೆ. ಆ ಕೊಠಡಿಯಲ್ಲಿ ತುಂಡಾದ ಕುರ್ಚಿಯ ಪಿಟೋಪಕರಣ, ಚೆಲ್ಲಾ ಪಿಲ್ಲಿಯಾದ ಕಸ ಇತರೆ ವಸ್ತುಗಳು ಧೂಳಿನ ಮಯವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಸರ್ಕಾರದಿಂದ ಪುಸ್ತಕ ಬರುತ್ತದೆ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಈ ಪುಸ್ತಕ ಜೀವನವನ್ನೇ ರೂಪಿಸುತ್ತದೆ. ಅದರೆ ವಿದ್ಯಾರ್ಥಿಗಳ ಜೀವನ ರೂಪಿಸಬೇಕಾದ ಇಲಾಖೆ ಹೀಗೆ ಮಾಡಿರುವುದು ಯಾವ ಕಾರಣಕ್ಕೆ? ಹಾಳಾದ ಕಟ್ಟಡದಲ್ಲಿ ಅದರಲ್ಲೂ ಕಿಟಕಿ ಬಾಗಿಲು ಸರಿ ಇಲ್ಲದ ಕೊಠಡಿಯಲ್ಲಿ ಹೀಗೆ ಬೇಕಾ ಬಿಟ್ಟಿಯಾಗಿ ಧೂಳು ತುಂಬಿದ ಕೊಠಡಿಯಲ್ಲಿ ಪುಸ್ತಕ ಹಾಕಿರುವುದು ಸರಿಯೇ?
ಮಕ್ಕಳ ಜೀವನ ರೂಪಿಸಬೇಕಾದ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ತೋರುತ್ತಿರುವುದು ಯಾವ ಕಾರಣಕ್ಕೆ? ಎಂಬುದೇ ಯಕ್ಷ ಪ್ರೆಶ್ನೆಯಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆಯಾದ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಪುಸ್ತಕಗಳು ನೆಲದ ಮೇಲೆ ಧೂಳಿನಿಂದ ಕೂಡಿದ್ದರೂ ಕಿಟಕಿ ಬಾಗಿಲುಗಳ ಗಾಜುಗಳು ಒಡೆದಿದ್ದರೂ ಕೊಠಡಿ ಪೂರ್ಣ ಧೂಳಿನ ಮಯವಾಗಿದ್ದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಪುಸ್ತಕಗಳ ಕಥೆ ಈ ರೀತಿಯಾದರೆ ಹೇಗೆ? ಮಾನ್ಯ ಶಿಕ್ಷಣ ಸಚಿವರೇ ಇದಕ್ಕೆ ಉತ್ತರಿಸುತ್ತೀರಾ?
Tags:
ತೀರ್ಥಹಳ್ಳಿ ಸುದ್ದಿ