ಅಣ್ಣಪ್ಪ ಮಾಸ್ಟರ್ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ಕೊನೆಗೂ ಸಿಕ್ಕಿತು ಗೌರವ ಧನ! Big impact

ಅಣ್ಣಪ್ಪ ಮಾಸ್ಟರ್ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ಕೊನೆಗೂ ಸಿಕ್ಕಿತು ಗೌರವ ಧನ!

ಶಿವಮೊಗ್ಗ ಸುದ್ದಿ ಫಲಶ್ರುತಿ!

ತೀರ್ಥಹಳ್ಳಿ : ಶಿಕ್ಷಕರ ದಿನಾಚರಣೆಯ ದಿನ ತೀರ್ಥಹಳ್ಳಿಯ ಮೇಗರವಳ್ಳಿ ಶಾಲೆಯ ಶಿಕ್ಷಕಿಯೊಬ್ಬರಿಗೆ ಅಣ್ಣಪ್ಪ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಆ ಪುರಸ್ಕಾರದ ಜೊತೆಗೆ ನೀಡಲಾಗುತ್ತಿದ್ದ ಗೌರವ ಧನವನ್ನು ಶಿಕ್ಷಣ ಇಲಾಖೆ ನೀಡಿರಲಿಲ್ಲ.


ಈ ವಿಚಾರ ಶಿವಮೊಗ್ಗ ಸುದ್ದಿ ಮಾಧ್ಯಮಕ್ಕೆ ತಿಳಿಯುತ್ತಿದ್ದಂತೆ ಶಿಕ್ಷಕರಿಗೆ ನೀಡಬೇಕಿದ್ದ ಹಣ ಯಾರ ಪಾಲು? ಎಂಬ ಶೀರ್ಷಿಕೆ ಅಡಿಯಲ್ಲಿ ಇಂದು ಬೆಳಗ್ಗೆ 10:30  ರ ಸಮಯದಲ್ಲಿ ಸುದ್ದಿ ಪ್ರಕಟ ಮಾಡಿತ್ತು. ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂದು ಸಂಜೆ ಮೇಗರವಳ್ಳಿ ಶಾಲೆಯ ಶಿಕ್ಷಕಿಗೆ ರೂ.100 ಹಾಗೂ ರೂ.4900 ರಂತೆ ಎರಡು ಬಾರಿ ಫೋನ್ ಪೆ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.

ಈ ವಿಷಯವನ್ನು ಮೇಗರವಳ್ಳಿ ಶಾಲಾ ಶಿಕ್ಷಕಿ ಶಿವಮೊಗ್ಗ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದು ಗೌರವ ಧನವನ್ನು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಎರಡು ತಿಂಗಳ ನಂತರ ಅದರಲ್ಲೂ ಶಿವಮೊಗ್ಗ ಸುದ್ದಿ ಮಾಧ್ಯಮದ ವರದಿ ನಂತರ  ಅಧಿಕಾರಿಗಳು ಗೌರವ ಧನ ನೀಡಿದ್ದಾರೆ.



Previous Post Next Post