ತೀರ್ಥಹಳ್ಳಿ ಶಿಕ್ಷಣ ಇಲಾಖೆಯಲ್ಲಿ ನಡೆಯಿತಾ ಬ್ರಹ್ಮಾಂಡ ಭ್ರಷ್ಟಾಚಾರ!!? education department

ತೀರ್ಥಹಳ್ಳಿ ಶಿಕ್ಷಣ ಇಲಾಖೆಯಲ್ಲಿ 
ನಡೆಯಿತಾ ಬ್ರಹ್ಮಾಂಡ ಭ್ರಷ್ಟಾಚಾರ!!?

ಶಿಕ್ಷಕರಿಗೆ ನೀಡಬೇಕಿದ್ದ ಪುರಸ್ಕಾರದ ಹಣ ಯಾರ ಪಾಲು!?

ತಮ್ಮ ಬಳಿ ಬಂದಿದ್ದ ಲಕ್ಷ್ಮೀಯನ್ನು ದೂರ ತಳ್ಳಿತಾ ಶಿಕ್ಷಣ ಇಲಾಖೆ!?
ತೀರ್ಥಹಳ್ಳಿ : ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ; ಗುರು ಸಾಕ್ಷಾತ್ ಪರಂ ಬ್ರಹ್ಮ, ತಸ್ಮೈ ಶ್ರೀ ಗುರವೇ ನಮಃ" ವಿದ್ಯಾರ್ಥಿಯೊಬ್ಬನನ್ನು ಕತ್ತಲೆಯಿಂದ ಬೆಳಕಿನ ಮಾರ್ಗಕ್ಕೆ ಕರೆದುಕೊಂಡು ಹೋಗುವುದಕ್ಕೆ ಕಾರಣವಾಗುವುದರಿಂದ ಅಂತಹ ಗುರುಗಳನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಅಂತಹದರಲ್ಲಿ ಈಗ ಸರಸ್ವತಿ ಪುತ್ರರು ಎಂದೆಸಿನಿಕೊಂಡವರು ಲಕ್ಷೀ ಕೃಪೆ ಬೇಡುವುದನ್ನು ಬಿಟ್ಟು ಲಕ್ಷೀಯನ್ನೇ ವಶ ಪಡಿಸಿಕೊಳ್ಳುವುದಕ್ಕೆ ತಯಾರಿ ಮಾಡುತ್ತಿದ್ದಾರಾ? ಎಂಬ ಅನುಮಾನಕ್ಕೆ ತೀರ್ಥಹಳ್ಳಿಯ ಶಿಕ್ಷಣ ಇಲಾಖೆಯ ಒಂದು ತೀರ್ಮಾನ ಕಾರಣವಾಗಿದೆ.

ಹೌದು ಶಿಕ್ಷಕರಿಗಾಗಿಯೇ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಎಲ್ಲೆಡೆ ಆಚರಣೆ ಮಾಡಲಾಗುತ್ತದೆ. ಆದರೆ ಅಂತಹ ಹಬ್ಬದ ವಾತಾವರಣ ಇರುವ ದಿನವನ್ನು ಇತ್ತೀಚಿಗೆ ಬರಿ ಹಣಕ್ಕಾಗಿ ಆಚರಣೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಆರಂಭವಾಗಿದೆ. 




ಹಾಗಾದರೆ ಇದರ ಹಿನ್ನಲೆ ಏನು? ಯಾಕೆ ಈ ವಿಷಯ ಮತ್ತೆ ಮುನ್ನಲೆಗೆ ಬಂತು!

ಶಿಕ್ಷಕರ ದಿನಾಚರಣೆಯ ದಿನ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸರ್ಕಾರಿ  ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಭಾಗವಹಿಸಬಹುದಾಗಿತ್ತು. ಇಂತಹ ಕಾರ್ಯಕ್ರಮ ಮಾಡಲು ಶಿಕ್ಷಕರ ಬಳಿಯೇ 1000 ಹಣವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಪಡೆದಿದ್ದಾರೆ ಎಂಬ ಮಾಹಿತಿ ಎಲ್ಲಡೆ ಹರಡಿತ್ತು. ಈ ವಿಚಾರ ಶಿವಮೊಗ್ಗ ಸುದ್ದಿ ಮಾಧ್ಯಮ ವರದಿ ಸಹ ಮಾಡಿತ್ತು.

ಶಿಕ್ಷಕರ ಬಳಿ ಹಣ ಪಡೆದ ವಿಚಾರ ಸುದ್ದಿಯಾಗುತ್ತಿದ್ದಂತೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಶಿಕ್ಷಕರ ಬಳಿಯೇ ಹಣ ಪಡೆದು ಶಿಕ್ಷಕರಿಗೆ ಸನ್ಮಾನ ಮಾಡುವ ಅವಶ್ಯಕತೆ ಏನಿದೆ? ಎಂಬ ಪ್ರೆಶ್ನೆ ಸಾರ್ವಜನಿಕ ವಲಯದಿಂದಲೂ ಕೇಳಿ ಬಂದಿತ್ತು. ಈಗ ಆ ವಿಚಾರಕ್ಕೆ ಸಂಬಂಧಪಟ್ಟಂತೆ ಶಿಕ್ಷಕರ ಬಳಿ ಪಡೆದುಕೊಂಡಿದ್ದ ಹಣವನ್ನು ವಾಪಾಸ್ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಗಾದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ಬಳಿ ತೆಗೆದುಕೊಂಡಿದ್ದ ಲಕ್ಷೀಯನ್ನು ವಾಪಾಸ್ ಕೊಡಲು ನಿರ್ಧಾರ ಮಾಡಿಯೇ ಬಿಟ್ರಾ? ಎಂಬ ಪ್ರೆಶ್ನೆ ಈಗ ಮೂಡಿದೆ.

ಶಿಕ್ಷಕರಿಗೆ ನೀಡಬೇಕಿದ್ದ ಪುರಸ್ಕಾರದ ಹಣ ಯಾರ ಪಾಲು!?

ಶಿಕ್ಷಕರ ದಿನಾಚರಣೆಯ ದಿನ ಅಣ್ಣಪ್ಪ ಮಾಸ್ಟರ್ ಎಂಬ ಪುರಸ್ಕಾರವನ್ನು ತಾಲೂಕಿನ ಶಿಕ್ಷಕಿಯೊಬ್ಬರಿಗೆ ನೀಡಲಾಗಿದೆ. ಆದರೆ ಅದರ ಜೊತೆಗೆ ನೀಡಬೇಕಿದ್ದ ಹಣವನ್ನು ಕಾರ್ಯಕ್ರಮ ಮುಗಿದು ಎರಡು ತಿಂಗಳು ಆದರೂ ಇನ್ನು ಕೊಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಹಣವನ್ನು ಇಲಾಖೆ ಅಧಿಕಾರಿಗಳು ಕೊಡುವುದಲ್ಲ, ಯಾರ ಹೆಸರಿನಲ್ಲಿ ಪುರಸ್ಕಾರ ನೀಡಲಾಗುತ್ತದೋ ಅದಕ್ಕೆ ಸಂಬಂಧ ಪಟ್ಟವರೇ ಕೊಡುತ್ತಾರೆ. ಹಾಗಾದ್ರೆ ಆ ಪುರಸ್ಕಾರದ ಹಣ ಈಗ ಯಾರ ಪಾಲಾಗಿದೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.




Previous Post Next Post