ಸರ್ಕಾರಿ ಶಾಲೆಯ ಬೀಗ ಒಡೆದು ಕಳವಿಗೆ ಪ್ರಯತ್ನ..! Thirthahalli

ಸರ್ಕಾರಿ ಶಾಲೆಯ ಬೀಗ ಒಡೆದು ಕಳವಿಗೆ ಪ್ರಯತ್ನ..!

ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಲಾಗಿರುವ ಘಟನೆ ದಬ್ಬಣಗದ್ದೆಯಲ್ಲಿ ನಡೆದಿದೆ.. ಇದು ಏಕೋಪಾಧ್ಯಾಯ ಶಾಲೆಯಾಗಿದ್ದು, ಶಿಕ್ಷಕ ಆರೋಗ್ಯ ಸಮಸ್ಯೆಯಿಂದಾಗಿ ಕೆಲ ದಿನಗಳಿಂದ ಬಂದಿರಲಿಲ್ಲ. ಈ ಕಾರಣದಿಂದ ಇಲ್ಲಿನ ವಿದ್ಯಾರ್ಥಿಗಳನ್ನು ಮತ್ತೊಂದು ಶಾಲೆಗೆ ಕರೆದೊಯ್ದು ತರಗತಿ ನಡೆಸಲಾಗುತ್ತಿತ್ತು..

ಈ ಎಲ್ಲಾ ವಿಷಯ ತಿಳಿದ ದುಷ್ಕರ್ಮಿಗಳು ತಡರಾತ್ರಿ ಶಾಲೆಯ ಬಾಗಿಲಿನ ಬೀಗ ಒಡೆದು ಕಂಪ್ಯೂಟರ್‌, ಡಿಜಿಟಲ್‌ ಉಪಕರಣಗಳನ್ನು ಹೊತ್ತೊಯ್ಯುವ ಯತ್ನ ನಡೆಸಿದ್ದಾರೆ.. ಅಲ್ಲದೆ ಶಾಲಾ ದಾಖಲೆಗಳನ್ನು ಪರಿಶೀಲಿಸಿ ಚೆಲ್ಲಾಪಿಲ್ಲಿ ಮಾಡಿರುವ ಆರೋಪಗಳೂ ಕೇಳಿ ಬಂದಿವೆ. 

ಮಾಳೂರು ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Previous Post Next Post