ಐದು ವರ್ಷಗಳ ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯತ್ ಆಡಳಿತ ಇಂದಿಗೆ ಮುಕ್ತಾಯ..!
ತೀರ್ಥಹಳ್ಳಿ : ನಾವು ಮಾಡಿರುವ ಕೆಲಸ ಜನರಿಗೆ ಮುಟ್ಟಿದೆ ಎಂದು ಭಾವಿಸುತ್ತೇನೆ.. ನಮ್ಮ ಆಡಳಿತದ ಅವಧಿ ಇಂದಿಗೆ ಮುಕ್ತಾಯವಾಗಿದೆ. ಐದು ವರ್ಷದಲ್ಲಿ ಐದು ಅಧ್ಯಕ್ಷರು ಒಳ್ಳೆಯ ಆಡಳಿತ ನಡೆಸಿದ್ದಾರೆ.. ಈ ಐದು ವರ್ಷದಲ್ಲಿ 26 ಕೋಟಿ ಕೆಲಸ ಆಗಿದೆ. ಕೆಲವೊಂದು ಕೆಲಸ ಬಾಕಿ ಇದೆ. ಉಳಿದಿರುವ ಕೆಲಸಗಳು ಆಗುತ್ತವೆ ಎಂಬುದಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಹೇಳಿದರು..
ಪಟ್ಟಣ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮೊದಲ ಅವಧಿಯಿಂದ ಶಬನಮ್, ಸುಶೀಲ ಶೆಟ್ಟಿ, ಗೀತಾ ರಮೇಶ್, ರಹಮತ್ ಉಲ್ಲಾ ಅಸಾದಿ ಹಾಗೂ ಕಡೆಯದಾಗಿ ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ್ದೇವೆ.. ಫುಡ್ ಕೋರ್ಟ್, ಬಯಲು ರಂಗಮಂದಿರ, ಸ್ವಿಮ್ಮಿಂಗ್ ಪೂಲ್ ಹಾಗೂ ಪ್ರಮುಖವಾಗಿ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ.. ಜನರಿಗೆ ಅನುಕೂಲ ಆಗುವಂತಹ ಕೆಲಸಗಳನ್ನು ನಾವು ನಿರ್ವಹಿಸಿದ್ದೇವೆ ಎಂಬುದಾಗಿ ಹೇಳಿದರು..
ಗಾಂಧಿಚೌಕದಲ್ಲಿ ಅಶೋಕ ಸ್ತಂಭ, ರಾಮೇಶ್ವರ ದೇವಸ್ಥಾನದ ರಸ್ತೆಗೆ ಇಂಟರ್ ಲಾಕ್, ಬಡವರಿಗೆ ಶೌಚಾಲಯ, ಬಹುಮುಖ್ಯವಾಗಿ ಪಟ್ಟಣ ಪಂಚಾಯತ್ ನ ನೂತನ ಕಟ್ಟಡ ನಿರ್ಮಾಣ, ರಸ್ತೆ, ಚರಂಡಿ, ಕುರುವಳ್ಳಿ ಜೋಪಡಿ ನಿವಾಸಿಗಳಿಗೆ ನಿವೇಶನ, ತುಂಗಾ ಸೇತುವೆ ಬಳಿ ಸೆಲ್ಫಿ ಪಾಯಿಂಟ್ ಸೇರಿ ಹಲವು ಕೆಲಸಗಳು ನಮ್ಮ ಕಾಂಗ್ರೆಸ್ ಆಡಳಿತದಲ್ಲಿ ನಡೆದಿದೆ ಎಂದರು..
ಗೀತಾ ರಮೇಶ್ ಮಾತನಾಡಿ ಐದು ವರ್ಷಗಳ ಕಾಲ ಆಡಳಿತವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದೇವೆ.. 20 ವರ್ಷದ ನಂತರ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿತ್ತು.
ಈ ಆಡಳಿತವನ್ನು ಪಟ್ಟಣದ ಅಭಿವೃದ್ಧಿ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದೇವೆ.. ರಾಮಕೊಂಡ ಹೋಗುವ ಸೇತುವೆ, ತುಂಗಾ ನದಿ ತೀರದಲ್ಲಿ ವಿದ್ಯುತ್ ದೀಪ, ಪಾರ್ಕ್ ಅಭಿವೃದ್ಧಿ, ವಾಲಿಬಾಲ್ ಕೋರ್ಟ್ ನಿರ್ಮಾಣ, ಸ್ಮಶಾನದ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಸೇರಿ ಹಲವಾರು ಕೆಲಸಗಳು ನಡೆದಿವೆ.. ಇಲ್ಲಿಯವರೆಗೆ ನಮಗೆ ಜನರು ಸಹಕಾರ ನೀಡಿದ್ದಾರೆ. ಇನ್ನು ಮುಂದೆಯೂ ಸಹ ಸಹಕಾರ ಇರಲಿ ಎಂಬುದಾಗಿ ತಿಳಿಸಿದರು..
Tags:
ಪಟ್ಟಣ ಪಂಚಾಯತ್