ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣವನ್ನು ಪಟಾಕಿ ಮಾರಾಟ ಮಾಡಲು ನೀಡದಂತೆ ಮನವಿ Thirthahalli

ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣವನ್ನು ಪಟಾಕಿ ಮಾರಾಟ ಮಾಡಲು ನೀಡದಂತೆ ಮನವಿ 

ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಕ್ರೀಡಾಂಗಣವನ್ನು ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಅಂಗಡಿ ನಡೆಸುವ ಬಗ್ಗೆ ಯಾವುದೇ ರೀತಿಯಾದ ಪರವಾನಗಿಯನ್ನು ನೀಡಬಾರದು ಎಂಬುದಾಗಿ ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಸದಸ್ಯರು ಮನವಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ..

ಸದರಿ ಕ್ರೀಡಾಂಗಣವನ್ನು ಪಟಾಕಿ ವ್ಯಾಪಾರ ನಡೆಸಲು ನೀಡಿದಲ್ಲಿ ಕ್ರೀಡಾಂಗಣ ಹಾಳಾಗುತ್ತದೆ, ಆಟೋಟಕ್ಕೆ ತುಂಬಾ ತೊಂದರೆ ಆಗುತ್ತದೆ, ಕಳೆದ ವರ್ಷ ಸಹ ನಾವು ತಮ್ಮಲ್ಲಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಬಾರದಾಗಿ ಕೋರಿದ್ದರೂ, ಅನುಮತಿ ನೀಡಿದ್ದು, ನಮ್ಮ ಸದರಿ ಕ್ರೀಡಾಂಗಣವು ಸಾರ್ವಜನಿಕರಿಗೆ ವಾಕಿಂಗ್ ಹೋಗಲೂ ಮತ್ತು ಚಿಕ್ಕ ಚಿಕ್ಕ ಮಕ್ಕಳು ಆಟ ಆಡದ ಪರಿಸ್ಥಿತಿಯಾಗಿತ್ತು. ಆದ್ದರಿಂದ ತಾವು ದಯಮಾಡಿ ಸಾರ್ವಜನಿಕ ಕ್ರೀಡಾಂಗಣವನ್ನು ಕ್ರೀಡೆಗಾಗಿ ಮಾತ್ರ ಅವಕಾಶ ಮಾಡಿಸಿ ಕೊಡಬೇಕಾಗಿಯೂ ಇತರೇ ಯಾವುದೇ ವಾಣಿಜ್ಯ ಬಳಕೆಗೆ ನೀಡಬಾರದಾಗಿ ತಿಳಿಸಿದ್ದಾರೆ..

ಈ ಬಾರಿ ನಮ್ಮ ಕೋರಿಕೆ ನೆರವೇರಿಸದೇ ವಾಣಿಜ್ಯ ಬಳಕೆಗೆ ನೀಡಿದಲ್ಲಿ ನಾವು ಈ ಬಗ್ಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ...
Previous Post Next Post