ಶಿವಮೊಗ್ಗದಲ್ಲಿ ಮೈತ್ರಿ ಪಕ್ಷವೇ ಹೀರೊ - ಕಾಂಗ್ರೆಸ್ ಜಿರೋ - ಕುತೂಹಲ ಮೂಡಿಸಿದ ಸಮೀಕ್ಷೆ ವರದಿ
ಶಿವಮೊಗ್ಗ : ಖಾಸಗಿ ಸಂಸ್ಥೆಯಾದ ಬಾರ್ ಡಾಟಾ - ವೋಟರ್ ಇಂಡಿಯಾ ಕಂಪನಿ 2027 ರ ಕರ್ನಾಟಕ ರಾಜ್ಯದ ಚುನಾವಣೆಯ ಸಮೀಕ್ಷೆ ನಡೆಸಿದ್ದು ಇದರಲ್ಲಿ ಕರ್ನಾಟಕ ರಾಜ್ಯದ ಚುಕ್ಕಾಣಿ ಬಿಜೆಪಿ ಹಿಡಿಯಲಿದೆ ಎಂಬುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಮೈತ್ರಿ ಪಕ್ಷವೇ ಹೀರೊ - ಕಾಂಗ್ರೆಸ್ ಜಿರೋ - ಎಂಬುದಾಗಿ ಸಮೀಕ್ಷೆ ವರದಿ ಮಾಡಿದ್ದು ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ..
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 3 ಬಿಜೆಪಿ, 3 ಕಾಂಗ್ರೆಸ್ ಹಾಗೂ 1 ಜೆಡಿಎಸ್ ಪಕ್ಷ ಅಧಿಕಾರದಲ್ಲಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೂಲಕ ಚುನಾವಣೆ ಅಖಾಡಕ್ಕೆ ಧೂಮುಕಲಿದೆ ಎಂಬ ಮಾತು ಕೇಳಿ ಬಂದಿದೆ. ಹಾಗಾಗಿ ಚುನಾವಣೆಯ ಈ ಸಮೀಕ್ಷೆ ಮತ್ತಷ್ಟು ಕುತೂಹಲ ಮೂಡಿಸಿದೆ..
ಬಾರ್ ಡಾಟಾ - ವೋಟರ್ ಇಂಡಿಯಾ ಕಂಪನಿಯ 2027 ರ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 7 ಕ್ಷೇತ್ರಗಳು ಸಹ ಮೈತ್ರಿ ಪಾಲಗಲಿದೆ ಎಂಬುದಾಗಿ ತಿಳಿಸಿದೆ.. ಕಾಂಗ್ರೆಸ್ ಒಂದು ಕ್ಷೇತ್ರ ಗೆಲ್ಲುವುದಿಲ್ಲ ಎಂಬುದಾಗಿ ಹೇಳಿದ್ದು ಇದು ಈಗ ರಾಜಕೀಯ ವಲಯದಲ್ಲಿ ಬಾರಿ ಚರ್ಚೆ ಮಾಡಿದೆ.. ಸಮೀಕ್ಷೆ ಪ್ರಕಾರ ಶಿವಮೊಗ್ಗ ರೂರಲ್ ಹಾಗೂ ಭದ್ರಾವತಿಯಲ್ಲಿ ಜೆಡಿಎಸ್ ಗೆಲುವು ಕಂಡರೆ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಸೊರಬ ಹಾಗೂ ಶಿಕಾರಿಪುರದಲ್ಲಿ ಕಮಲ ಕಿಲ ಕಿಲ ಎನ್ನಲಿದೆ ಎಂದು ಸಮೀಕ್ಷೆ ತಿಳಿಸಿದೆ..
ಈಗಾಗಲೇ ಈ ಸಮೀಕ್ಷೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಮಾಡುತ್ತಿದ್ದು ಚುನಾವಣೆಗೆ ಒಂದು ವರ್ಷದ ಮೊದಲೇ ಅಲ್ಲೋಲ ಕಲ್ಲೋಲ ಮಾಡಿದಂತೆ ಕಾಣಿಸುತ್ತಿದೆ.. ಒಟ್ಟಿನಲ್ಲಿ ರಾಜಕೀಯ ಚದುರಂಗದ ಆಟದಲ್ಲಿ ಕೊನೆಯ ಕ್ಷಣದವರೆಗೂ ಗೆಲುವು - ಸೋಲಿನ ಲೆಕ್ಕಾಚಾರಕ್ಕೆ ಕಾಯಲೇಬೇಕಿದೆ....
Tags:
ಶಿವಮೊಗ್ಗ ಸುದ್ದಿ