ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೆ ಹೆಚ್ಚು - ಪ್ರದೀಪ್ Thirthahalli

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೆ ಹೆಚ್ಚು - ಪ್ರದೀಪ್ 


ತೀರ್ಥಹಳ್ಳಿ : ಮತದಾನ ಪರಿಷ್ಕರಣೆ ಅಧಿಕೃತವಾಗಿ ಮುಕ್ತಾಯಗೊಂಡಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದಾಗಿ ಗ್ರೇಡ್ 2 ತಹಸೀಲ್ದಾರ್ ಪ್ರದೀಪ್ ತಿಳಿಸಿದರು..

ತಾಲೂಕು ಕಚೇರಿ ಸಭಾಂಗಣದಲ್ಲಿ ಎಸ್ ಐ ಆರ್ ವಿಚಾರವಾಗಿ ಮಾತನಾಡಿದ ಅವರು ಮೊದಲ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ 1,92,314 ಮತದಾರರು ಇದ್ದರು.. ಆ ನಂತರ ಹೆಸರು ಬದಲಾವಣೆ ಹಾಗೂ ಇತರೆ ವಿಚಾರದಲ್ಲಿ ಪ್ರತಿಯೊಬ್ಬರಿಗೆ ಫಾರಂ ನೀಡಿದ್ದೇವೆ.. ತೀರ್ಥಹಳ್ಳಿ -171, ಹೊಸನಗರ -69 ಹಾಗೂ ಶಿವಮೊಗ್ಗ ತಾಲೂಕಿನ ಒಂದು ಹೋಬಳಿ -28 ಒಟ್ಟು 258 ಮತದಾನ ಮಾಡುವ ಸ್ಥಳ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇದೆ ಎಂಬುದಾಗಿ ತಿಳಿಸಿದರು..

ಮತದಾನ ಪರಿಷ್ಕರಣೆ ನಂತರ ಅಧಿಕೃತವಾಗಿ 
1, 80,115 ಮತದಾರರು ಇದ್ದು ಅದರಲ್ಲಿ 88,447 ಪುರುಷ ಮತದಾರರು ಹಾಗೂ 91,668 ಮಹಿಳಾ ಮತದಾರರು ಇದ್ದಾರೆ.. ಉಳಿದ 12 ಸಾವಿರದಷ್ಟು ಮತದಾರರಲ್ಲಿ ಹಲವರು ನಿಧನರಾಗಿದ್ದು, ಕೆಲವು ಬೇರೆ ಕಡೆ ಸ್ಥಳಾಂತರ ಆಗಿದ್ದಾರೆ.. ಈಗಾಗಲೇ ಹಲವರಿಗೆ ಬಿ ಎಲ್ ಓ ಗಳು ನೋಟೀಸ್ ನೀಡಿದ್ದಾರೆ..ಒಂದು ವೇಳೆ ಇಲ್ಲೇ ಇದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೋದಲ್ಲಿ ಇನ್ನು ಹೆಸರು ಸೇರಿಸಲು ಅವಕಾಶ ಇದೆ ಎಂಬುದಾಗಿ ತಿಳಿಸಿದರು.
Previous Post Next Post