ತೀರ್ಥಹಳ್ಳಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ ..!?
ತೀರ್ಥಹಳ್ಳಿ : ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಆರೋಪ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ತೀರ್ಥಹಳ್ಳಿಯ ಮಹಿಳೆಯೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ..
ತೀರ್ಥಹಳ್ಳಿಯ ಹೊದಲ ಗ್ರಾಮದ ಅಕ್ಷತಾ ಸಾವನ್ನಪ್ಪಿರುವ ಮಹಿಳೆ.. ಅಕ್ಷತಾ ಅವರ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಾಲ್ವರ ಮೇಲೆ ಎಫ್ ಐ ಆರ್ ದಾಖಲಾಗಿದೆ..
ಪ್ರಕರಣದ ಹಿನ್ನಲೆ ಏನು?
ಸುಮಾರು ಎಂಟು ವರ್ಷದ ಹಿಂದೆ ಹೊಸನಗರದ ಭೈರಗುಂದ ಗ್ರಾಮದ ಅಕ್ಷತಾ ಎಂಬುವರನ್ನು ತೀರ್ಥಹಳ್ಳಿ ಹೊದಲ ಗ್ರಾಮದ ಪುರುಷೋತ್ತಮ್ ಎಂಬುವರ ಜೊತೆ ವಿವಾಹ ನಡೆದಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದಾರೆ.. ಅಕ್ಟೋಬರ್ 13 ರಂದು ಕೌಟುಂಬಿಕ ಕಲಹ ನಡೆದಿದ್ದು ಪತಿ ಪುರುಷೋತ್ತಮ ಅವರ ಎದುರಿನಲ್ಲೇ ಅತ್ತೆ ಲೀಲಾವತಿಯವರು ಅಕ್ಷತಾ ಅವರ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಮನನೊಂದ ಅಕ್ಷತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಕ್ಷತಾ ಮೃತಪಟ್ಟಿದ್ದಾರೆ.
ಅಕ್ಷತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ನೀಡಿದ ಮರಣಪೂರ್ವ ಹೇಳಿಕೆ ಅಧರಿಸಿ ಅಕ್ಷತಾ ತಾಯಿ ಮೀನಾಕ್ಷಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳವೇ ಮಗಳ ಸಾವಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ..
Tags:
ಕ್ರೈಂ ಸುದ್ದಿ