ತೀರ್ಥಹಳ್ಳಿ ತಹಸೀಲ್ದಾರ್ ಜೀಪ್ ಗೆ ಕಾರು ಡಿಕ್ಕಿ - ಎಸ್ಕೇಪ್ ಆಗಲು ಮುಂದಾದ ಕಾರು ಚಾಲಕನ ಹಿಡಿದ ತಹಸೀಲ್ದಾರ್ ಹಾಗೂ ಡ್ರೈವರ್..! Shivamogga

ತೀರ್ಥಹಳ್ಳಿ ತಹಸೀಲ್ದಾರ್ ಜೀಪ್ ಗೆ ಕಾರು ಡಿಕ್ಕಿ - ಎಸ್ಕೇಪ್ ಆಗಲು ಮುಂದಾದ ಕಾರು ಚಾಲಕನ ಹಿಡಿದ ತಹಸೀಲ್ದಾರ್ ಹಾಗೂ ಡ್ರೈವರ್..!

ಶಿವಮೊಗ್ಗ: ಬಾಲರಾಜ್ ಅರಸ್ ರಸ್ತೆಯಲ್ಲಿ ತೀರ್ಥಹಳ್ಳಿಯ ತಹಶೀಲ್ದಾರ್ ಜೀಪಿಗೆ ಐ 20 ಕಾರೊಂದು ಡಿಕ್ಕಿ ಹೊಡೆದಿದೆ.. ಆ ನಂತರ ಕಾರು ಚಾಲಕ  ಎಸ್ಕೇಪ್ ಆಗಲು ಮುಂದಾಗಿದ್ದಾನೆ.

ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಜೀಪ್ ನಲ್ಲಿರುವಾಗಲೇ ಈ ಘಟನೆ ನಡೆದಿದ್ದು ಎಸ್ಕೆಪ್ ಆಗಲು ಮುಂದಾದ ಕಾರನ್ನು ಬೆನ್ನು ಹತ್ತಿದ ತೀರ್ಥಹಳ್ಳಿ ತಹಶಿಲ್ದಾರ್ ಹಾಗೂ ಜೀಪ್ ಚಾಲಕ ರಾಘವೇಂದ್ರ ಶಿವಮೊಗ್ಗ ಡಿಸಿ ಕಚೇರಿ ಮುಂಭಾಗ ಐ 20ಕಾರನ್ನು ಅಡ್ಡಗಟ್ಟಿದ್ದಾರೆ.

ಐ 20 ಕಾರಿನ ಚಾಲಕ ಮದ್ಯಪಾನ ಮಾಡಿ ಅದರ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.. ಶಿಕಾರಿಪುರ ಮೂಲದ ಕಾರು ಚಾಲಕ ಮಂಜುನಾಥ್ ಎಂಬುದಾಗಿ ಗುರುತಿಸಲಾಗಿದ್ದು ಆತ ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಶಿಕಾರಿಪುರದತ್ತ ತೆರಳುತ್ತಿದ್ದ.

ಕಾರು ನಿಲ್ಲಿಸದೆ ಹೋಗಿದ್ದಕ್ಕೆ ತೀರ್ಥಹಳ್ಳಿ ತಹಸೀಲ್ದಾರ್ ಚೇಸಿಂಗ್ ಮಾಡಿ ಸ್ಥಳಕ್ಕೆ ಪೋಲಿಸರನ್ನು ಕರೆಸಿದ್ದಾರೆ. ಈ ಸಮಯ ಕುಡಿದ ಅಮಲಿನಲ್ಲಿ ಕಾರು ಚಾಲಕ ಕೆಲಕಾಲ ರಂಪಾಟ ಮಾಡಿದ್ದಾನೆ.
ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ..
Previous Post Next Post