"ಹೊರ ಬಯಲೇ" ಆಸರೆ - ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ಕುಟುಂಬಸ್ಥರ ಪರದಾಟ..!
ತೀರ್ಥಹಳ್ಳಿ : ಪುಟ್ಟ ಗ್ರಾಮ, ಹತ್ತರಿಂದ ಹನ್ನೆರಡು ಮನೆಗಳು, ಕೂಲಿ ಕೆಲಸವನ್ನ ನಂಬಿ ಜೀವನ ನಡೆಸುತ್ತಿರುವ ಕುಟುಂಬದವರು.. ಇಲ್ಲಿ ಹಲವರಿಗೆ ಪಡಿತರ ಚೀಟಿಯ ಭಾಗ್ಯವೇ ಇಲ್ಲದಂತಾಗಿದೆ.. ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಯಾವುದೇ ಸೌಲಭ್ಯಗಳು ಸಹ ಇಲ್ಲಿನ ನಿವಾಸಿಗಳಿಗೆ ದೊರಕದಂತಾಗಿದೆ.. ಗ್ರಾಮ ಪಂಚಾಯಿತಿ ಸೇರಿ ಯಾವುದೇ ಅಧಿಕಾರಿಗಳಿಗೂ ಮನವಿ ಮಾಡಿದರು ಯಾವುದೇ ಸೌಲಭ್ಯ ದೊರಕದೆ ಕಷ್ಟದ ಜೀವನ ನಡೆಸುತ್ತಿರುವ ಹೊರಬೈಲಿನ ಜನರ ಕಷ್ಟ ಹೇಳತೀರದಂತಾಗಿದೆ..
ಹೌದು ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲಿನ ನಿವಾಸಿಗಳು ಶೌಚಾಲಯಕ್ಕೂ ಹೋಗಲು ಬಯಲನ್ನೇ ಅವಲಂಬಿಸಿರುವ ಪರಿಸ್ಥಿತಿ ಇಲ್ಲಿನ ಜನರದ್ದು.. ಪರಿಶಿಷ್ಟ ಜಾತಿಯ 13 ಹಾಗೂ ಭೋವಿ ಜನಾಂಗದ ಒಂದು ಮನೆ ಇದ್ದು ಈ ಎಲ್ಲಾ ಮನೆಯ ಕುಟುಂಬಸ್ಥರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.. ಅಧಿಕಾರಿಗಳು ನಮ್ಮನ್ನೆಲ್ಲರನ್ನ ನೋಡಿದರೆ ಸಾಕು ಮೂಗು ಮುರಿಯುತ್ತಾರೆ ಕುಡಿಯುವ ನೀರಿಗೂ ನಾವು ಪರದಾಟ ನಡೆಸಬೇಕಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ..
ಇಲ್ಲಿನ ನಿವಾಸಿಗಳಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ. ಬಯಲೇ ಶೌಚಾಲಯವಾದಂತಿದೆ.. ಇಲ್ಲಿನ ಮಹಿಳೆಯರು ಸ್ನಾನವನ್ನು ಮಾಡಲು ಸಹ ಕತ್ತಲೆಯಾಗುವವರೆಗೂ ಕಾಯಬೇಕಾದ ಅನಿವಾರ್ಯತೆ ಇದೆ.. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲಿನ ಕುಟುಂಬಸ್ಥರಿಗೆ ಸರ್ಕಾರದ ಸೌಲಭ್ಯಗಳು ಲಭಿಸದೆ ಇರುವುದಕ್ಕೆ ಕಾರಣ ಎಂದು ಆರೋಪಿಸಲಾಗಿದೆ..
Tags:
ತೀರ್ಥಹಳ್ಳಿ ಸುದ್ದಿ