ಸಾಗರ ತಹಸೀಲ್ದಾರ್ ಬಗ್ಗೆ ಶಾಸಕರಿಗೆ ಅಸಮಾಧಾನವೋ? ಹೊಟ್ಟೆಕಿಚ್ಚೋ? ಕೆಡಿಪಿ ಸಭೆಯಲ್ಲಿ ಆ ರೀತಿ ಹೇಳಿದ್ಯಾಕೆ? Sagara

ಸಾಗರ ತಹಸೀಲ್ದಾರ್ ಬಗ್ಗೆ ಶಾಸಕರಿಗೆ ಅಸಮಾಧಾನವೋ? ಹೊಟ್ಟೆಕಿಚ್ಚೋ? ಕೆಡಿಪಿ ಸಭೆಯಲ್ಲಿ ಆ ರೀತಿ ಹೇಳಿದ್ಯಾಕೆ? 

ಸಾಗರ : ತಾಲೂಕಿನಲ್ಲಿ ಇತ್ತೀಚಿಗೆ ತಹಸೀಲ್ದಾರ್ ನೇತೃತ್ವದಲ್ಲಿ ನಿರಂತರವಾಗಿ ದಾಳಿ ಹಾಗೂ ಕಾರ್ಯಾಚರಣೆ ನಡೆಯುತ್ತಿದೆ.  ಆದರೆ ಈ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ದಾಳಿ ಹಾಗೂ ಕಾರ್ಯಾಚರಣೆ ಮಾಡಿ ಅದರ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುತ್ತಿದ್ದೀರಾ,  ಇದರಿಂದ ನೀವು ಪ್ರಚಾರವನ್ನು ಪಡೆಯುತ್ತಿದ್ದೀರಾ ಅಕ್ರಮವನ್ನು ಕೂಡಲೇ ನಿಲ್ಲಿಸಬೇಕು ಎಂದು ಸಭೆಯಲ್ಲಿ ಶಾಸಕರು ತಾಕಿತು ಮಾಡಿದ್ದಾರೆ..

ತಾಲೂಕಿನಲ್ಲಿ ಕೆಲಸ ನಡೆಯಬೇಕೆ ಹೊರತು ಪ್ರಚಾರವಲ್ಲ, ಪ್ರಚಾರದ ಕೆಲಸವನ್ನು ಬಿಟ್ಟು ನಿಯಮಾನಸಾರವಾಗಿ ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡಿ, ಎಂದು ಹೇಳಿದ್ದು ಇದು ಶಾಸಕರಿಗೆ ತಹಸಿಲ್ದಾರ್ ಮೇಲೆ ಇರುವ ಅಸಮಾಧಾನವೋ? ಅಥವಾ ಹೊಟ್ಟೆಕಿಚ್ಚೋ?  ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಂಡಿದ್ದಾರೆ..

ಸಭೆಯಲ್ಲಿ ತಾಲೂಕು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು 15 ದಿನಗಳ ಗಡುವು ನೀಡಿದ್ದಾರೆ.





Previous Post Next Post