ಮೇಲಿನಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಯುವಕ ಸಂಘದ 29 ನೇ ವರ್ಷದ ಗಣೇಶೋತ್ಸವ - ಎಷ್ಟು ದಿನ- ಏನೆಲ್ಲಾ ಕಾರ್ಯಕ್ರಮ ಇರುತ್ತೆ..!? Ganeshotsava

ಮೇಲಿನಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಯುವಕ ಸಂಘದ 29 ನೇ ವರ್ಷದ ಗಣೇಶೋತ್ಸವ - ಎಷ್ಟು ದಿನ- ಏನೆಲ್ಲಾ ಕಾರ್ಯಕ್ರಮ ಇರುತ್ತೆ..!? 

ತೀರ್ಥಹಳ್ಳಿ : ತಾಲೂಕಿನ ಗಣಪತಿ ವಿಸರ್ಜನಾ ಮೆರವಣಿಗೆ ಮೂಲಕ ಜನ ಮೆಚ್ಚಿನ ಗಣಪತಿಯಾಗಿರುವ ಹಾಗೂ ಅತ್ಯಂತ ವೈಭವದ ಗಣೇಶೋತ್ಸವದಲ್ಲಿ ಒಂದಾಗಿರುವ, ಮೇಲಿನಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಯುವಕ ಸಂಘದ ವತಿಯಿಂದ ಈ ಬಾರಿ 29 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸೆಪ್ಟೆಂಬರ್ 14 ರಿಂದ ಸೆ.18 ರವರೆಗೆ 5 ದಿನಗಳ ಪರ್ಯಂತ ನಡೆಸಲು ತೀರ್ಮಾನಿಸಲಾಗಿದೆ.

ಕಾರ್ಯಕ್ರಮ ಏನೇನು..!?

ದಿನಾಂಕ-14 /9 /26 ಸೋಮವಾರ ಶ್ರೀ ವಿದ್ಯಾಗಣಪತಿ ಸ್ವಾಮಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ

15/9/26 ಮಂಗಳವಾರ ಸಂಜೆ 7 ಕ್ಕೆ ಸೃಷ್ಟಿ ಕಲಾ ತಂಡ, ಸೃಷ್ಟಿ ಡ್ಯಾನ್ಸ್ ಫ್ಯೂಷನ್ ಮೇಲಿನಕುರುವಳ್ಳಿ ಇವರಿಂದ ಕ್ಲಾಸಿಕಲ್, ವೆಸ್ಟರ್ನ್, ಯಕ್ಷಗಾನ, ಜಾನಪದ ಕಾರ್ಯಕ್ರಮ, ವಿಶೇಷ ಆಕರ್ಷಣೆಯಾಗಿ ತೆಯ್ಯಂ ( ಕೇರಳದ ಸುಪ್ರಸಿದ್ಧ ದೈವಿ ಕಲಾಪ್ರಕಾರವಾದ ತೆಯ್ಯಂ ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. )  ನಡೆಯಲಿದೆ.

16/9/26 ಬುಧವಾರ ಬೆಳಗ್ಗೆ 10 ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಏಕನಾರಿ ಕೇಳ ಗಣಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ .. 
ಸಂಜೆ 7 ಕ್ಕೆ ಸೆಲೆಬ್ರಿಟಿ ಆಂಕರ್ ನಂದನ್ ಅವರ ನೇತೃತ್ವದಲ್ಲಿ 
ಹಾಸ್ಯಮಯ ನಗೆ ಆಟ, ಓಟಗಳನ್ನೊಳಗೊಂಡ ವಿಶಿಷ್ಟ ವಿಭಿನ್ನ ರೀತಿಯ ನವ ನವೀನ ಕಾರ್ಯಕ್ರಮ ನಡೆಯಲಿದೆ..

17/9/26 ಗುರುವಾರ ಬೆಳಗ್ಗೆ ಹಾಗೂ ಸಂಜೆ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ..

18/9/26 ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ವಿವಿಧ ವೇಷಭೂಷಣಗಳಿಂದ, ಅದ್ದೂರಿ ರಾಜಬೀದಿ ಉತ್ಸವದೊಂದಿಗೆ  ಶ್ರೀ ಸ್ವಾಮಿಯ ವಿಸರ್ಜನೆ ನಡೆಯಲಿದೆ..

ಈ ಎಲ್ಲಾ ದೇವತಾ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತನು - ಮನ - ಧನ ಸಹಕಾರವನ್ನು ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿದ್ಯಾಗಣಪತಿ ಯುವಕ ಸಂಘ, ಮೇಲಿನಕುರುವಳ್ಳಿ ಇವರು ಮನವಿ ಮಾಡಿದ್ದಾರೆ..

ವಿದ್ಯಾಗಣಪತಿಯ ವಿಸರ್ಜನಾ ಮೆರವಣಿಗೆಯೇ ಈ ಸಮಿತಿಯ ಹೈಲೈಟ್..!

ಹೌದು ತೀರ್ಥಹಳ್ಳಿಯಲ್ಲಿ ಎಲ್ಲಾ ಗಣಪತಿ ವಿಸರ್ಜನೆಗಳು ಒಂದು ಕಡೆ ನಿಂತರೆ,  ಮೇಲಿನ ಕುರುವಳ್ಳಿಯ ವಿದ್ಯಾಗಣಪತಿ ವಿಸರ್ಜನಾ ಮೆರೆವಣಿಗೆ ವಿಶೇಷ ರೀತಿಯಲ್ಲಿ ನಡೆಯಲಿದೆ.. ಅದರಲ್ಲೂ ಯುವಕ ಯುವತಿಯರ ಜಬರ್ದಸ್ತ್ ಡ್ಯಾನ್ಸ್, ಜನರ ಆಕರ್ಷಣೆಯಾಗಿರಲಿದೆ.. ಬ್ರದರ್ ಮೂರು ವರ್ಷಗಳಿಂದ ಈ ವಿಶೇಷ ರೀತಿಯಲ್ಲಿ ಯುವಕ ಯುವತಿಯರ ನೃತ್ಯ ಜನರ ಕಣ್ಮನ ಸೆಳೆಯುತ್ತಿದ್ದು ಈ ಬಾರಿ ಹೇಗಿರಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ ..






Previous Post Next Post