ಜನರ ಬದುಕನ್ನು ಉಳಿಸಲು ಹೋರಾಟ, ಇದು ರಾಜಕೀಯ ಅಲ್ಲ - ಆರ್ ಎಂ ಮಂಜುನಾಥ್ ಗೌಡ RMM

ಜನರ ಬದುಕನ್ನು ಉಳಿಸಲು ಹೋರಾಟ, ಇದು ರಾಜಕೀಯ ಅಲ್ಲ - ಆರ್ ಎಂ ಮಂಜುನಾಥ್ ಗೌಡ 

ತೀರ್ಥಹಳ್ಳಿ : ಸೆ. 5 ರಂದು ಕೈಮರದ ಶ್ರೀ ರಕ್ತೇಶ್ವರಿ ದೇವಸ್ಥಾನದಿಂದ ಸಹಕಾರಿ ಕ್ಷೇತ್ರದ ವತಿಯಿಂದ ಬೃಹತ್ ಪಾದಯಾತ್ರೆ ನಡೆಯಲಿದೆ.. ಆ ನಂತರ ತಾಲೂಕು ಕಛೇರಿ ಎದುರು ಬಹಿರಂಗ ಸಭೆ ನಡೆಯಲಿದೆ.. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಹೇಳಿದರು..

ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 2013 ರಲ್ಲಿ ಈ ವರದಿ ಜಾರಿ ಆಗಿದ್ದು 7 ಬಾರಿ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದೇವೆ.. ಶಿವಮೊಗ್ಗ ಜಿಲ್ಲೆಯಲ್ಲೇ 470 ಕ್ಕೂ ಹೆಚ್ಚು ಗ್ರಾಮಗಳು ಈ ವರದಿಯಿಂದ ಅಭಿವೃದ್ಧಿಗೆ ಅಡೆ ತಡೆ ಉಂಟಾಗುತ್ತದೆ.. ಈ ವರದಿ ತಿರಸ್ಕಾರ ಮಾಡಲು ಆಗುವುದಿಲ್ಲ ಆದರೆ ಬದಲಾವಣೆ ಮಾಡಲು ಎಲ್ಲಾ ಸಾಧ್ಯತೆ ಇರುವುದರಿಂದ ಪಾದಯಾತ್ರೆ ಮಾಡಿ ಆಕ್ಷೇಪಣೆ ಸಲ್ಲಿಸಲಿದ್ದೇವೆ ಎಂದರು..

ತೀರ್ಥಹಳ್ಳಿ ತಾಲೂಕಿನಲ್ಲೇ 146 ಗ್ರಾಮಗಳು ಈ ವರದಿಯಲ್ಲಿ ಇರುವುದರಿಂದ ಕೃಷಿ ಚಟುವಟಿಕೆಗೆ, ಮನೆ, ಕೊಟ್ಟಿಗೆ, ಜಾಗ, ಹೀಗೆ ಹಲವರಿಗೆ ತೊಂದರೆ ಆಗುತ್ತದೆ. ಈಗಾಗಲೇ ಕೇರಳದಲ್ಲೂ ಈ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿ ಮಾಡಿಕೊಂಡಿದ್ದಾರೆ. ಹಾಗಾಗಿ ಕೇರಳ ಮಾದರಿಯಲ್ಲೇ ನಾವು ಸಲ್ಲಿಸುವ ಆಕ್ಷೇಪಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಸ್ತೂರಿ ರಂಗನ್ ವರದಿ ವಿಚಾರಕ್ಕೆ ವಿಶೇಷ ಅಧಿವೇಶನ ಕರಿಯಬೇಕು, ಅದರಲ್ಲಿ ವರದಿಯಿಂದ ಆಗುವ ಅನುಕೂಲ ಹಾಗೂ ಅನಾನೂಕೂಲದ ಬಗ್ಗೆ ಚರ್ಚೆ ನಡೆಸಿ ಕೇಂದ್ರಕ್ಕೆ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಹೇಳಬೇಕು ಎಂದರು..

ಜನರ ಬದುಕನ್ನು ಉಳಿಸಲು ಹೋರಾಟ, ಇದು ರಾಜಕೀಯ ಅಲ್ಲ, ಅದಕ್ಕಾಗಿ ಮಾಡುವುದಾದರೆ ಏನು ಹೇಳಲು ಆಗುವುದಿಲ್ಲ. ಸಹಕಾರಿಯಿಂದ ಮಾಡುತ್ತಿರುವುದಕ್ಕೆ ನಮ್ಮಲ್ಲಿ ರೈತರು ಎಷ್ಟೋ ಸಾಲ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಅವರಿಗೆ ತೊಂದರೆ ಆಗುವ ಕಾರಣದಿಂದ ಸಹಕಾರಿ ವೇದಿಕೆ ವತಿಯಿಂದ ಈ ಹೋರಾಟ ನಡೆಯುತ್ತಿದೆ. ಇದರಲ್ಲಿ ಪ್ರತಿಯೊಬ್ಬ ರೈತರು, ಕೃಷಿ ಕಾರ್ಮಿಕರು, ಸಹಕಾರಿಗಳು ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು..

ಅರಣ್ಯ ಮತ್ತು ಹವಾಮಾನ ಇಲಾಖೆಗೆ ಬದಲಾವಣೆ ಮಾಡಲು ಅವಕಾಶ ಇದೆ. ಕೇಂದ್ರ ಸರ್ಕಾರ ಅದನ್ನು ತಿಳಿಸಬೇಕು.
ಮುಖ್ಯಮಂತ್ರಿಗಳು ಈ ವಿಷಯವನ್ನು ಗಮನವಹಿಸುತ್ತಾರೆ ಎಂಬುದಾಗಿ ನಂಬಿದ್ದೇನೆ, ಅರಣ್ಯ ಇಲಾಖೆ ಸಹ ಜನರಿಗೆ ಬದುಕಲು ಅವಕಾಶ ಮಾಡಿಕೊಡಬೇಕು. ಶೆಟ್ಟಿಹಳ್ಳಿ ಅಭಯಾರಣ್ಯ ಮಧ್ಯೆ ನಾನು ಇದ್ದೇನೆ, ಆಗುಂಬೆ, ಮಲ್ಲಂದೂರು ಹೀಗೆ ಹಲವು ಕಡೆ ಯಾವುದೇ ಜನರು ಇಲ್ಲ. ಈ ವಿಚಾರದಲ್ಲಿ ತಿದ್ದುಪಡಿಯಾಗಬೇಕು,  ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬುದು ಇಲ್ಲ. ಯಾರೇ ಈ ವಿಚಾರದಲ್ಲಿ ಪ್ರತಿಭಟನೆ ಮಾಡಿದರೂ ನಮ್ಮ ಬೆಂಬಲ ಇದೆ ಎಂದರು..

ಕಾಂಗ್ರೆಸ್ ಪಕ್ಷದಲ್ಲೇ ವೈಮನಸ್ಸು ಇದ್ಯಾ..?

ಕಾಂಗ್ರೆಸ್ ಪ್ರತಿಭಟನೆ ಕಿಮ್ಮನೆ ನೇತೃತ್ವದಲ್ಲಿ ಇದೆ ಎಂಬ ಪತ್ರಕರ್ತರ ಪ್ರೆಶ್ನೆಗೆ ನಾನು ಪಕ್ಷದ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ, ಇದು ಸಹಕಾರಿ ವೇದಿಕೆ, ಆ ವಿಚಾರ ಬೇರೆ ಸಂದರ್ಭದಲ್ಲಿ ಮತಾನಾಡೋಣ ಎಂಬುದಾಗಿ ಹೇಳಿದ್ದು ಭಾರಿ ಚರ್ಚೆಗೆ ಈಡು ಮಾಡಿತು.. 

ಈ ಸಂದರ್ಭದಲ್ಲಿ ವಿಜಯದೇವ್, ಡಾ. ಸುಂದರೇಶ್, ರಾಘವೇಂದ್ರ ಶೆಟ್ಟಿ, ಶಶಾಂಕ್ ಹೆಗಡೆ, ರಹಮತ್ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ, ಕಟ್ಟೆಹಕ್ಲು ಕಿರಣ್, ಹಾರೋಗೋಳಿಗೆ ಪದ್ಭಾನಾಬ್ ಸೇರಿ ಹಲವರು ಉಪಸ್ಥಿತರಿದ್ದರು..






Previous Post Next Post