ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಹಬ್ಬವನ್ನು ಆಚರಿಸಿ - ಎಎಸ್'ಪಿ ಭಾನುಪ್ರಕಾಶ್
ತೀರ್ಥಹಳ್ಳಿ : ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಹೋರಾಟಕ್ಕಾಗಿ ಗಣೇಶೋತ್ಸವವನ್ನು ಆಚರಿಸಲು ಆರಂಭಿಸಲಾಯಿತು. ಆದರೆ ಇತ್ತೀಚಿಗೆ ಅದು ದೇಶಭಕ್ತಿ ಭಾವನೆಯನ್ನು ನಿರ್ಮಾಣ ಮಾಡುವ ವೇದಿಕೆ ಕೂಡ ಆಗಿಲ್ಲ, ಹಾಗೆಯೇ ಸಾಂಸ್ಕೃತಿಕ ವೇದಿಕೆ ಕೂಡ ಆಗಿಲ್ಲ ಏನೋ ಒಂದು ರೀತಿಯ ಯದ್ವಾ ತದ್ವ ಆಚರಣೆ ಮಾಡುವ ರೀತಿ ಆಗಿದೆ. ಅಂತಹ ಆಚರಣೆ ಬೇಡ, ಒಳ್ಳೆಯ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..
ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿ ಗಣಪತಿಯನ್ನ ಇಟ್ಟುಕೊಂಡು ಪೂಜೆ ಮಾಡಲಾಗುತ್ತದೆ ಅಂತಹ ಸಂದರ್ಭದಲ್ಲಿ ಆದರೂ ಸಹ ಭಕ್ತಿ ಗೀತೆಗಳನ್ನ ಹಾಕಿ, ಯಾವುದು ಅರ್ಥವಿಲ್ಲದ ಸಿನಿಮಾ ಹಾಡು ಹಾಕುವುದು ಬೇಡ, ಗಣಪತಿ ವಿಸರ್ಜನೆ ವೇಳೆ ಸಹ ಚಂಡೇ, ಭಜನಾ ಮಂಡಳಿಗಳು, ಸಾಂಸ್ಕೃತಿಕ ವೈಭವವನ್ನು ತೋರಿಸುವ ಕಾರ್ಯಕ್ರಮಗಳನ್ನು ನಡೆಸಿ, ಡಿಜೆ ಹಾಕಿದಾಗ ರಾತ್ರಿ ಯುವಕರಿಗೆ ಕುಣಿಯುವ ಹುಚ್ಚು ಹಿಡಿಯುತ್ತದೆ.. ಅಂತಹ ಸಂದರ್ಭದಲ್ಲಿ ಯಾರೇ ಮಾತನಾಡಿದರು ಕಷ್ಟ, ನಾನೇ ಒಂದು ಕಡೆ ಪ್ರೆಶ್ನೆ ಮಾಡಲು ಹೋದರು ಯಾರೋ ನೀನು ಎಂಬ ಮಾತುಗಳು ಸಹ ಬರುತ್ತದೆ. ಹಾಗಾಗಿ ಗಣೇಶೋತ್ಸವವೂ ಧಾರ್ಮಿಕತೆಯಿಂದ ಕೂಡಿರಲಿ ಎಂದರು..
ಇದನ್ನು ಓದಿ : 👉 ತೀರ್ಥಹಳ್ಳಿಯ ಎರಡು ಗಣಪತಿ ಸಂಘಗಳಿಗೆ ಪೊಲೀಸರಿಂದ ಗೌರವ
ಎಎಸ್'ಪಿ ಭಾನುಪ್ರಕಾಶ್ ಮಾತನಾಡಿ ಪೋಲಿಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸಿ, ರಾತ್ರಿ 10.30 ರ ತನಕ ಕಾರ್ಯಕ್ರಮ ನಡೆಸಲು ಅವಕಾಶ ಇರುತ್ತದೆ. ಅರ್ಧ ಗಂಟೆ ತಡವಾದರೂ ಸಹ ಪೊಲೀಸರು ಬಿಡುತ್ತಾರೆ. ಆದರೆ ಅಂತಹ ಸಂದರ್ಭದಲ್ಲಿ ಪ್ರಶ್ನೆ ಮಾಡಲು ಬರುವಂತಹ ಪೊಲೀಸರ ವಿರುದ್ಧ ಗಲಾಟೆ ಮಾಡಲು ಹೋಗಬೇಡಿ.. ಪೂಜೆ ಸಂದರ್ಭದಲ್ಲಿ ಅಥವಾ ಮಕ್ಕಳ ಕಾರ್ಯಕ್ರಮಗಳನ್ನು ತಡೆಯುವ ಯಾವುದೇ ಮನಸ್ಥಿತಿ ಆಗಲಿ ಅವಶ್ಯಕತೆ ಆಗಲಿ ಪೊಲೀಸರಿಗೆ ಇರುವುದಿಲ್ಲ.. ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಹಬ್ಬವನ್ನು ಆಚರಿಸಿ ಎಂದರು..
ತಹಸಿಲ್ದಾರ್ ರಂಜಿತ್ ಮಾತನಾಡಿ ಈಗಾಗಲೇ ಎಲ್ಲಾ ಇಲಾಖೆಯಿಂದ ಅನುಮತಿಯನ್ನು ಪಡೆಯಲು ಸಹಕಾರಿಯಾಗುವಂತೆ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ.. ಕಡೆಯ ದಿನ ಬಂದು ಅನುಮತಿ ಪಡೆಯುವುದಕ್ಕಿಂತ ಈಗಲೇ ನಿಮ್ಮ ನಿಮ್ಮ ಗಣಪತಿ ಸಮಿತಿಯ ಹೆಸರನ್ನು ನೋಂದಾಯಿಸಿ ಇಲಾಖೆಯ ಅನುಮತಿಯನ್ನು ಪಡೆಯಿರಿ.. ಅನುಮತಿ ಪಡೆಯಲು ಹೇಳುತ್ತಿರುವುದು ಬೇರೆ ಕಾರಣಕ್ಕೆ ಅಲ್ಲ, ಗಣಪತಿ ವಿಸರ್ಜನೆಯ ದಿನ, ಸಮಯ, ಪ್ರತಿಯೊಂದು ಅಧಿಕಾರಿಗಳಿಗೆ ತಿಳಿಯಬೇಕು ಎನ್ನುವ ಸಲುವಾಗಿ ಈ ಒಂದು ವ್ಯವಸ್ಥೆ ಮಾಡಲಾಗಿದೆ. ಗಣೇಶೋತ್ಸವದಲ್ಲಿ ಪ್ರತಿಯೊಬ್ಬರು ಅಧಿಕಾರಿಗಳಿಗೆ ಸಹಕಾರ ನೀಡಿ ಎಂದರು..
ಈ ವೇಳೆ ಡಿಜೆ ಅನುಮತಿ ಹಾಗೂ ಕಳೆದ ಬಾರಿಯ ಗಣಪತಿ ವಿಸರ್ಜನೆ ವೇಳೆ ಡಿಜೆ ಹಾಕಿದ್ದಕ್ಕೆ ಕೇಸ್ ಹಾಕಲಾಗಿತ್ತು ಎಂಬ ಸಾರ್ವಜನಿಕರ ಪ್ರಶ್ನೆಗೆ ಡಿಜೆ ಸದ್ದಿನಿಂದ ಹಲವರಿಗೆ ತೊಂದರೆಯಾಗುತ್ತಿದೆ.. ಅದರಲ್ಲೂ ಕೋರೊನ ನಂತರದಲ್ಲಿ ಸಣ್ಣ ಸಣ್ಣವರಿಗೂ ಕೂಡ ಹೃದಯಾಘಾತವಾಗುತ್ತಿದೆ.. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ.. ಡಿಜೆ ಹಾಕಿದರೂ ಸಹ ಅತೀ ಹೆಚ್ಚಿನ ಸೌಂಡ್ ಹಾಕದೆ ಜಾಗ್ರತೆ ವಹಿಸಿ.. ವಿಸರ್ಜನೆ ವೇಳೆಯಲ್ಲಿ ಆದಷ್ಟು ಬೇಗ ವಿಸರ್ಜನೆ ಮಾಡುವಂತೆ ಸಮಯ ನಿಗದಿ ಮಾಡಿಕೊಳ್ಳಿ ಎಂದರು..
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ನಾಗರಾಜ್, ಸಬ್ ಇನ್ಸ್ಪೆಕ್ಟರ್ ಸುಷ್ಮಾ, ಆಗುಂಬೆ ಸಬ್ ಇನ್ಸ್ಪೆಕ್ಟರ್ ಶಿವನ ಗೌಡ, ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು..
Tags:
ಗಣೇಶೋತ್ಸವ