ತೀರ್ಥಹಳ್ಳಿಯ ಎರಡು ಗಣಪತಿ ಸಂಘಗಳಿಗೆ ಪೊಲೀಸರಿಂದ ಗೌರವ Thirthahalli Ganeshotsava

ತೀರ್ಥಹಳ್ಳಿಯ ಎರಡು ಗಣಪತಿ ಸಂಘಗಳಿಗೆ ಪೊಲೀಸರಿಂದ ಗೌರವ 

 ಛತ್ರಕೇರಿ ಮತ್ತು ಸೀಬಿನಕೆರೆಯ ಗಣಪತಿ ಸಂಘಗಳಿಗೆ ಗೌರವ
ತೀರ್ಥಹಳ್ಳಿ : ಪೊಲೀಸರ ಮೆಚ್ಚಿನ ಗಣಪತಿಯೆಂದೇ ಪ್ರಸಿದ್ಧವಾಗಿರುವ ತೀರ್ಥಹಳ್ಳಿ ಪಟ್ಟಣದ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ಅಧ್ಯಕ್ಷರಿಗೆ ಪೊಲೀಸ್ ಇಲಾಖೆ ಹಾಗೂ ಶಾಸಕರು ಗೌರವಿಸಿ ಸನ್ಮಾನಿಸಿದರು..

43 ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿರುವಂತಹ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ಯುವಕರು ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡುವುದಿಲ್ಲ.. ಅಲ್ಲದೆ ಸಾಮಾಜಿಕ ಕಳಕಳಿಯನ್ನ ಹೊತ್ತು ಪ್ರತಿಯೊಂದು ಕಾರ್ಯಕ್ರಮಗಳನ್ನು ಮಾಡಿಕೊಂಡು ವಿಸರ್ಜನೆಯ ವೇಳೆ ಸಾಂಸ್ಕೃತಿಕ ವೈಭವವನ್ನು ಎತ್ತಿ ತೋರಿಸುವಂತಹ ಮೆರವಣಿಗೆ ನಡೆಸುತ್ತಾರೆ.. ಈ ಕಾರಣದಿಂದಲೇ ಪೊಲೀಸರ ಮೆಚ್ಚಿನ ಗಣಪತಿ ಎಂದೇ  ಪ್ರಸಿದ್ಧಿಯಾಗಿದೆ..


 ಸೀಬಿನಕೆರೆಯ ಭಾವೈಕ್ಯತೆಯನ್ನು ಗಣಪತಿ 

 ಪಟ್ಟಣದ ಸೀಬಿನಕೆರೆಯಲ್ಲಿ ಪ್ರತಿಷ್ಠಾಪನೆ ಮಾಡುವಂತಹ ಗಣಪತಿ ಒಂದು ರೀತಿ ಸಾಮರಸ್ಯವನ್ನು ಹೊಂದುವಂತಹದ್ದು .ಹಿಂದೂ ಮುಸ್ಲಿಂ ಎಂಬ ಭಾವೈಕ್ಯತೆಯನ್ನು ಸಾರಿ ಹೇಳುವಂತಹ ಈ ವಿಶಿಷ್ಟ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರೇ ಪ್ರತಿಯೊಬ್ಬ ಗಣಪತಿಯ ಮೆರವಣಿಗೆಯಲ್ಲಿ ಇರುವಂತವರಿಗೆ ಪ್ರಸಾದವನ್ನು ವಿತರಿಸುತ್ತಾರೆ..

 ಈ ಕಾರಣದಿಂದ ಪೊಲೀಸ್ ಇಲಾಖೆ ಗಣೇಶೋತ್ಸವದ ಸಭೆಯಲ್ಲಿ ಸೀಬಿನಕೆರೆ ಹಾಗೂ ಛತ್ರಕೇರಿಯ ಶ್ರೀ ಸಿದ್ಧಿವಿನಾಯಕ ಯುವಕ ಸಂಘದ ಅಧ್ಯಕ್ಷರುಗಳಿಗೆ ಗೌರವಿಸಿ ಸನ್ಮಾನಿಸಿದರು..






Previous Post Next Post