ಸಹಕಾರಿ ಕ್ಷೇತ್ರದ ವೇದಿಕೆಯಿಂದ ಆರ್ ಎಂ ಎಂ ನೇತೃತ್ವದಲ್ಲಿ ಕೈಮರದಿಂದ ಪಾದಯಾತ್ರೆ..! ಯಾವಾಗ ?
ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಗಳು ಈಗಾಗಲೇ ನಡೆಯುತ್ತಿದ್ದು ಈಗ ತೀರ್ಥಹಳ್ಳಿಯಲ್ಲಿ ಬೃಹತ್ ಯಾತ್ರೆಗಳು ನಡೆಯಲಿವೆ. ಸೆ. 5 ರಂದು ಸಹಕಾರಿ ಕ್ಷೇತ್ರದ ವೇದಿಕೆಯಿಂದ ಆರ್ ಎಂ ಎಂ ನೇತೃತ್ವದಲ್ಲಿ ಕೈಮರದಿಂದ ಪಾದಯಾತ್ರೆ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ..
ಸೆ. 7 ರಂದು ಬಿಂತ್ಲಾ ಗ್ರಾಮದಿಂದ ಕಿಮ್ಮನೆ ನೇತೃತ್ವದಲ್ಲಿ ಪಾದಯಾತ್ರೆ ನಡೆಯುವ ಕಾರಣ ಮತ್ತೊಂದು ಬದಲಾವಣೆ ಆಗಿದೆ. ಸೆ. 7 ರಂದೆ ಎರಡು ಪಾದಯಾತ್ರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಸೆ. 5 ಶನಿವಾರ ಕೈಮರದಿಂದ ಪಾದಯಾತ್ರೆ ಆರಂಭವಾಗಿ 11 ಗಂಟೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಬಳಿ ಬಹಿರಂಗ ಸಭೆ ನಡೆಯಲಿದೆ.. ಕಸ್ತೂರಿ ರಂಗನ್ ವರದಿಯಲ್ಲಿ ತೀರ್ಥಹಳ್ಳಿಯ 146 ಗ್ರಾಮಗಳು ಇದ್ದು ಇದರಿಂದ ಮೂಲ ಸೌಕರ್ಯಕ್ಕೆ ಅಭಿವೃದ್ಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ.. ಈ ಕಾರಣಕ್ಕೆ ಈ ಪಾದಯಾತ್ರೆ ಬಹಳ ಮಹತ್ವ ಪಡೆದಿದೆ..
ಜಿಲ್ಲೆಯ ರೈತರು, ಸಹಕಾರಿಗಳು, ಕೃಷಿ ಕಾರ್ಮಿಕರು, ಸಾವಿರಾರು ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಆರ್ ಎಂಎಂ ಮನವಿ ಮಾಡಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ