ತೀರ್ಥಹಳ್ಳಿಯ ಮಾರಿಕಾಂಬ ಹಾಗೂ ಇಂದಾವರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ Varamahalakshmi pooje

ತೀರ್ಥಹಳ್ಳಿಯ ಮಾರಿಕಾಂಬ ಹಾಗೂ ಇಂದಾವರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ 

ತೀರ್ಥಹಳ್ಳಿ:  ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಆಗಸ್ಟ್ 21ರ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ವ್ರತಾಚರಣೆ ನಡೆಯಲಿದೆ. ದೇವಿಯ ಸ್ತುತಿ ಅರ್ಚನೆ ಇರುತ್ತದೆ. ಅಂದು ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಸುಮಂಗಲಿಯರಿಗೆ ಬಾಗಿನ ವಿತರಿಸಲಾಗುವುದು. ಭಾಗವಹಿಸಿದ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ.

ಭಕ್ತರು ಎಂದಿನಂತೆ ಶ್ರದ್ಧಾಭಕ್ತಿಯಿಂದ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ..

ಇಂದಾವರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ 

 ಪಟ್ಟಣದ ತುಂಗಾ ಕಾಲೇಜ ಸಮೀಪದಲ್ಲಿರುವ ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಗಸ್ಟ್ 21ರ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ವ್ರತಾಚರಣೆ ನಡೆಯಲಿದೆ.. ದೇವಿಗೆ ಅಭಿಷೇಕ ಅರ್ಚನೆ ಬೆಳಗ್ಗೆ 10 ಗಂಟೆಗೆ ಶ್ರೀ ಸೂಕ್ತ ಹೋಮ, ಬಾಗಿನ ಪೂಜೆ ನಡೆಸಲಾಗುತ್ತದೆ.. ಮಧ್ಯಾಹ್ನ ಅನ್ನ ಸಂತರ್ಪಣೆ ಕೂಡ ಜರುಗಲಿದೆ..

ಈ ಎಲ್ಲಾ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ದೇವಸ್ಥಾನದ ಸಮಿತಿಯವರು ಕೋರಿದ್ದಾರೆ 
Previous Post Next Post