ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಹ್ಯಾದ್ರಿ ಐಸಿಎಸ್ಇ ಶಾಲೆಯ ಐಶಿಕ ಕೆ ಆರ್ ಹಾಗೂ ಸಮನ್ಯು ಎನ್
ತೀರ್ಥಹಳ್ಳಿ : ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ CISCE ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಐಸಿಎಸ್ಇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಐಶಿಕ ಕೆ ಆರ್ (ರಾಕೇಶ್ ಹಾಗೂ ಅಶ್ವಿನಿ, ಕೆರೆಕೊಪ್ಪ ಇವರ ಮಗಳು) 3 ಕಿಮೀ. ವಾಕಿಂಗ್ ರೇಸ್ನಲ್ಲಿ ಹಾಗೂ ಸಮನ್ಯು ಎನ್. (ನಾಗರಾಜ್ ಹಾಗೂ ರೋಹಿಣಿ, ತೀರ್ಥಹಳ್ಳಿ ಇವರ ಮಗ) ಡಿಸ್ಕ್ ಥೋನಲ್ಲಿ ಬೆಳ್ಳಿಯ ಪದಕ ಪಡೆದು ಹೈದರಾಬಾದ್ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ಮತ್ತು ದೈಹಿಕ ಶಿಕ್ಷಕರುಗಳಾದ ಸಂತೋಷ ಕೆ ಟಿ, ಸಂಗೀತಾ ಎ ಹಾಗೂ ನಿಖಿಲ್ ಕೆ ಎಂ ಇವರನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿರುತ್ತಾರೆ
Tags:
ಸಹ್ಯಾದ್ರಿ ಸುದ್ದಿ