ಎಸ್ಐಆರ್ ಮೊದಲ ಹಂತ ಮುಕ್ತಾಯ - ಶಿವಮೊಗ್ಗ ಜಿಲ್ಲೆಯಲ್ಲಿ ಹೊರಗುಳಿದ 1 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು
ಶಿವಮೊಗ್ಗ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (SIR ) ಪ್ರಕ್ರಿಯೆ ಮೊದಲ ಹಂತದಲ್ಲಿ ಮುಕ್ತಾಯಗೊಂಡಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಈ ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.. ಜಿಲ್ಲೆಯಲ್ಲಿ ಸರಿ ಸುಮಾರು 15,19,000 + ಮತದಾರರ ಪೈಕಿ ಮಾಹಿತಿ ಪ್ರಕಾರ 1 ಲಕ್ಷದ 80 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳು ಈಗಿನ ಮತದಾರರ ಪಟ್ಟಿಯಿಂದ ಬಿಟ್ಟು ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೃತಪಟ್ಟವರ ಸಂಖ್ಯೆಗಿಂತ ಮಾಹಿತಿ ಲಭ್ಯವಾಗದವರೇ ಹೆಚ್ಚು
ಮತ ಪರಿಷ್ಕರಣೆಗಾಗಿ ಪ್ರತಿ ಮನೆಮನೆಗೂ ಬಿಎಲ್ಓ ಗಳು ಭೇಟಿ ನೀಡಿದ್ದರು.. ಈ ವೇಳೆ ಅನುಮಾನಸ್ಪದ, ಸ್ಥಳಾಂತರ ಹಾಗೂ ಮೃತಪಟ್ಟವರು ಅದರ ಜೊತೆಗೆ ಎರಡು ಕಡೆಗಳಲ್ಲಿ ನೋಂದಣಿಯಾಗಿರುವ (ASDDO) ಮತದಾರರನ್ನು ಗುರುತಿಸುವ ಕೆಲಸ ನಡೆದಿದೆ.. ಈ ವೇಳೆ ಶಿವಮೊಗ್ಗ ಜಿಲ್ಲಾದ್ಯಂತ ಕರಡು ಪಟ್ಟಿಯಿಂದ 1,88,000+ ಹೆಸರುಗಳಲ್ಲಿ 46,683 ಜನರನ್ನು ಮೃತಪಟ್ಟವರು ಎಂದು ಗುರುತಿಸಲಾಗಿದ್ದು ಉಳಿದವರ ಮಾಹಿತಿ ಲಭ್ಯವಾಗಿಲ್ಲ ಎಂದು ದಾಖಲಾಗಿದೆ.
ಊರು ಬಿಟ್ಟು ಸ್ಥಳಾಂತರವಾಗಿರುವವರ ಸಂಖ್ಯೆಯೇ ಹೆಚ್ಚು
ಶಿವಮೊಗ್ಗ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಹೊರಗಿಟ್ಟರು ಸಹ ಸರಿ ಸುಮಾರು 1.40 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದು ಇದರಲ್ಲಿ ಊರು ಬಿಟ್ಟು ಬೇರೆ ಕಡೆ ಸ್ಥಳಾಂತರವಾಗಿ ಇರುವವರೇ ಹೆಚ್ಚು ಎನ್ನಲಾಗಿದೆ.. ಒಂದು ಊರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆ ನಂತರ ಮನೆ, ಗ್ರಾಮ, ಊರನ್ನೇ ಬಿಟ್ಟು ಹೋಗಿದ್ದು ಅವರ ವಿಳಾಸ ಪತ್ತೆ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.. ಮೂರು ಬಾರಿ ಮನೆ ಮನೆಗೆ ಭೇಟಿ ನೀಡಿದ್ದರೂ ಸಹ ಸಾಕಷ್ಟು ಮತದಾರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ..
ಮತದಾರರ ಪಟ್ಟಿಗೆ ಸೇರಿಸಲು ಇನ್ನೊಂದು ಅವಕಾಶ
ಒಂದು ವೇಳೆ ಕರಡು ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿದ್ದಲ್ಲಿ ಇನ್ನೊಮ್ಮೆ ಅವಕಾಶ ಇದ್ದು ಫಾರ್ಮ್ 6 ಮೂಲಕ ತಮ್ಮ ಹೆಸರನ್ನು ಸೇರಿಸಬಹುದಾಗಿದೆ.. ಅದು ಕಟ್ಟ ಕಡೆಯ ಅವಕಾಶವಾಗಿದ್ದು ಒಂದು ವೇಳೆ ತಮ್ಮ ಹೆಸರು ಈ ಮತದಾರರ ಕರಡು ಪಟ್ಟಿಯಿಂದ ಬಿಟ್ಟು ಹೋಗಿರುವುದು ತಿಳಿದುಬಂದಲ್ಲಿ ಕೂಡಲೇ ತಮ್ಮ ವ್ಯಾಪ್ತಿಯ ಬಿ ಎಲ್ ಓ ಗಳನ್ನ ಸಂಪರ್ಕಿಸಿ ಮತದಾರರ ಪಟ್ಟಿಗೆ ತಮ್ಮ ತಮ್ಮ ಹೆಸರನ್ನು ಸೇರಿಸಲು ತಿಳಿಸಬಹುದಾಗಿದೆ...
Tags:
ಶಿವಮೊಗ್ಗ ಸುದ್ದಿ