ನಾವೆಲ್ಲರೂ ಎಷ್ಟೇ ಬೆಳೆದರೂ ಸಹ ನಮ್ಮ ಸಂಸ್ಕೃತಿ ಈ ಮಣ್ಣಿನಲ್ಲಿ ಕಲಿತ ಹಾಗೆ ಇರಬೇಕು - ತಹಸೀಲ್ದಾರ್ ರಂಜಿತ್ tth

ನಾವೆಲ್ಲರೂ ಎಷ್ಟೇ ಬೆಳೆದರೂ ಸಹ ನಮ್ಮ ಸಂಸ್ಕೃತಿ ಈ ಮಣ್ಣಿನಲ್ಲಿ ಕಲಿತ ಹಾಗೆ ಇರಬೇಕು - ತಹಸೀಲ್ದಾರ್ ರಂಜಿತ್ 

ತೀರ್ಥಹಳ್ಳಿ :  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ..ದೇಶಕ್ಕಾಗಿ ಮಡಿದ ವೀರ ಮಹನೀಯರನ್ನು ಸ್ವಾತಂತ್ರ್ಯ ಸಂಗ್ರಾಮದ ಯಶೋಗಾಥೆಯನ್ನು ಕೇಳುವುದು ವರ್ಷದ ವಾಡಿಕೆ. ನಾವೆಲ್ಲರೂ ನಮ್ಮ ಪೂರ್ವಜರಂತೆ ನೆತ್ತರು ಹರಿಸಬೇಕಿಲ್ಲ. ಸ್ವಾತಂತ್ರ್ಯ ಎಂದರೆ ಬರಿ ಬ್ರಿಟಿಷರಿಂದ ಮುಕ್ತಿಯಲ್ಲ, ಅಜ್ಞಾನದಿಂದ, ಬಡತನದಿಂದ, ಅನ್ಯಾಯದಿಂದ, ಆಸ್ಪಷ್ಟತೆಯಿಂದ ಮುಕ್ತಿ ಹೊಂದುವುದು ಎಂದು ತಹಸೀಲ್ದಾರ್ ರಂಜಿತ್ ತಿಳಿಸಿದರು.

ತೀರ್ಥಹಳ್ಳಿಯಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ರಾಷ್ಟ್ರಕವಿ ಕುವೆಂಪು, ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡರಂತಹ ಧೀಮಂತರು ಹುಟ್ಟಿದಂತಹ ಪವಿತ್ರ ನಾಡು ಇದು.. ಮಲೆನಾಡಿನ ಮಣ್ಣು, ಹೋರಾಟದ ಮಣ್ಣು, ಸುಸಂಸ್ಕೃತಿಯ ಮಣ್ಣು, ನಾವೆಲ್ಲರೂ ಎಷ್ಟೇ ಬೆಳೆದರೂ ಸಹ ನಮ್ಮ ಸಂಸ್ಕೃತಿ ಈ ಮಣ್ಣಿನಲ್ಲಿ ಕಲಿತಂತೆ ಇರಬೇಕು.. ಆಗ ಮಾತ್ರ ದೇಶ ಅಭಿಮಾನಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು..

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಈಗಾಗಲೇ ಎರಡು ಪುಟಾಣಿಗಳು ದೇಶದ ಬಗ್ಗೆ ಮಾತನಾಡಿದರು.. ಅವರು ಮಾತನಾಡಿದನ್ನು ನೋಡಿದರೆ ನಾವು ಮಾತನಾಡುವ ಅವಶ್ಯಕತೆ ಇರುವುದಿಲ್ಲ.. ನಮಗೆ ಅನ್ನವನ್ನು ಕೊಡದೇ ಬ್ರಿಟಿಷರು ಹಿಂಸೆ ಕೊಟ್ಟಿದ್ದರು. ಆದರೆ ಈಗ ನಾವು ಎಷ್ಟೋ ದೇಶಗಳಿಗೆ ಅನ್ನವನ್ನು ನೀಡುತ್ತಿದ್ದೇವೆ. ಆರ್ಥಿಕವಾಗಿ ಬಹಳಷ್ಟು ಮುಂದಿದ್ದೇವೆ ಎಂದು  ಹೇಳಿದರು..

2047 ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗುತ್ತದೆ.. ಇವತ್ತು ಮೋದಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಮಾತನಾಡಿ ಶಿಕ್ಷಣ ಇಲ್ಲದೆ ಯಾರು ಕೊರಗಬಾರದು.. ಜಗತ್ತು ಭಾರತದ ಕಡೆ ತಿರುಗಿ ನೋಡಬೇಕು.. ಜಗತ್ತಿನಲ್ಲಿ ನಾವು ಅದ್ವಿತೀಯ ಸ್ಥಾನದಲ್ಲಿ ಇರಬೇಕು ಎಂಬ ಆಸೆ ಬಿಚ್ಚಿಟ್ಟಿದ್ದಾರೆ..  ರಾಷ್ಟ್ರ ಕಟ್ಟುವುದು ಎಂದರೆ ಅದು ಸೈನಿಕರ ಕೆಲಸವಲ್ಲ.. ವಿದ್ಯಾವಂತರು, ದೇಶವನ್ನು ಕಟ್ಟಿ ಬೆಳೆಸಬೇಕಾದವರೇ ಈಗ ಲೂಟಿ ಮಾಡುತ್ತಿದ್ದಾರೆ ಇದು ದೇಶಕ್ಕೆ ಕಂಟಕವಾಗಿದೆ ಎಂದರು..

ಮಾದಕ ವಸ್ತುಗಳು ನಮ್ಮ ಯುವಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.. ಯುವ ಜನರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮಲ್ಲಿ ಸೈನ್ಯ ಎಷ್ಟೇ ಗಟ್ಟಿಯಾಗಿದ್ದರು ಒಳಗಿದ್ದವರ ಕೆಲವು ಷಡ್ಯಂತ್ರದಿಂದ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ.. ಬೇರೆ ದೇಶದ ನಡುವೆ ಯುದ್ಧ ಆದರೂ ನಾವು ಸಮಸ್ಯೆ ಎದುರಿಸುತ್ತಿದ್ದೇವೆ.. ಬಲಿಷ್ಠ ರಾಷ್ಟ್ರ ಕಟ್ಟಲು ನಾವೆಲ್ಲರೂ ಒಂದಾಗಬೇಕು.. ನಮಗೆ ಸ್ವಾತಂತ್ರ್ಯ ಕೊಟ್ಟವರ ಆತ್ಮ ಕಣ್ಣೀರು ಹಾಕುವಂತೆ ಆಗಬಾರದು. ಎಂದರು..

ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿಗೆ ಉಪಸ್ಥಿತರಿದ್ದರು...

Previous Post Next Post