ಸಹ್ಯಾದ್ರಿ ಪ್ರೌಢಶಾಲೆಗೆ ಚುಂಚಾದ್ರಿ ಕಪ್ Sahyadri

ಸಹ್ಯಾದ್ರಿ ಪ್ರೌಢಶಾಲೆಗೆ ಚುಂಚಾದ್ರಿ ಕಪ್

ತೀರ್ಥಹಳ್ಳಿ : ಆಗಸ್ಟ್ :  13 ಹಾಗೂ 14 ರಂದು ಸ್ವಾತಂತ್ರ್ಯೋತ್ಸವದ  ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಮತ್ತು ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಚುಂಚಾದ್ರಿ ಕಪ್ - 2026 ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
 
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಸುಮಾರು 80 ಪ್ರೌಢಶಾಲಾ ವಾಲಿಬಾಲ್ ತಂಡವು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸಹ್ಯಾದ್ರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಹಾಗೂ  ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. 

ವಿದ್ಯಾರ್ಥಿಗಳಿಗೆ ತರಬೇತಿ ನೀಡಿದಂತಹ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ  ದೈಹಿಕ ಶಿಕ್ಷಣ ನಿರ್ದೇಶಕರಾದಂತಹ  ಜಗದೀಶ್ ಎಂ.ಎಸ್ ಇವರಿಗೂ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
Previous Post Next Post