ಓಟನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಜ್ಞಾನೇಂದ್ರ ಜನಿವಾರ ಸುಡುವ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ - ಕಿಮ್ಮನೆ ರತ್ನಾಕರ್ Kimmane Ratnakar

ಓಟನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಜ್ಞಾನೇಂದ್ರ ಜನಿವಾರ ಸುಡುವ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ - ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ : ಯಾರ ಮನಸ್ಥಿತಿ ಅಪಾಯಕಾರಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಸರ್ಕಾರಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದ ಆರಗ ಜ್ಞಾನೇಂದ್ರ ನನ್ನ ಬಗ್ಗೆ ಮಾತನಾಡುತ್ತಾರೆ.. ಅಪಾಯಕಾರಿ ಜ್ಞಾನೇಂದ್ರನೇ,, ಮಾತನಾಡುವುದಕ್ಕೂ ಅವರ ಬಣ್ಣಕ್ಕೂ ಅವರ ಹಾಕುವ ಬಟ್ಟೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು..

ಬುಧವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಮಿತ್ ಶಾ ಇವರ ಆದರ್ಶ.. ಎರಡುವರೆ ವರ್ಷ ಜೈಲಿನಲ್ಲಿದ್ದ..ಆತ ಗಡಿಪಾರು ಅವ ಇವರ ಆದರ್ಶ..ಸಮಾಜಕ್ಕೆ ನಾನು ಅಪಾಯಕಾರಿ ಆಗಲು ಎಂದಿಗೂ ಸಾಧ್ಯವಿಲ್ಲ.. ಆಗುವುದು ಇಲ್ಲ ಅದೇನಿದ್ದರೂ ಆರಗ ಜ್ಞಾನೇಂದ್ರರೇ ಅಪಾಯಕಾರಿ ಎಂದರು..

ಜನಿವಾರ ಸುಟ್ಟು ಹಾಕುತ್ತೇನೆ ಎಂದು ನಾನೇನಾದರೂ ಹೇಳಿದ್ದರೆ ಸಾರ್ವಜನಿಕ ಜೀವನದಿಂದ ನಾನು ನಿವೃತ್ತಿ ಆಗುತ್ತೇನೆ.. ಅವರು ಅದನ್ನ ಸಾಭಿತು ಮಾಡಬೇಕು ಇಲ್ಲ ಅವರು ನಿವೃತ್ತಿ ಆಗಬೇಕು.
ಸುಮ್ಮನೆ ಏನೋ ಆಪಾದನೆ ಮಾಡುವುದು. ನನ್ನ ಜೊತೆ ಪ್ರಭಾಕರ್ ಹಾಗೂ ರಮೇಶ್ ಲಾಯರ್ ಇದ್ದರು. ನಾನು ಹಾಗೇನಾದರೂ ಜಾತಿ ವಿರೋಧಿ ಆಗಿದ್ದರೆ ನನ್ನ ಜೊತೆ ಅವರು ಇರುತ್ತಿದ್ರಾ?  ನಾನು ಜನಿವಾರ ಸುಟ್ಟು ಹಾಕುತ್ತೇನೆ ಎಂದು ಹೇಳಿಲ್ಲ.. ಸುಳ್ಳು ಸೃಷ್ಟಿ ಮಾಡಿದ್ದು ಜ್ಞಾನೇಂದ್ರ.. ಬ್ರಾಹ್ಮಣರ ಓಟನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಜ್ಞಾನೇಂದ್ರ ಈ ರೀತಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು..

ನನ್ನ ಭೂಗಳ್ಳ ಎನ್ನುತ್ತಾರೆ,  ಜನಾರ್ಧನ್ ರೆಡ್ಡಿ ಜೊತೆಗೆ ಇರುವುದು ಬಿಜೆಪಿ..ಭೂಗಳ್ಳತನ ಮಾಡಿ ಶಿಕ್ಷೆ ಅನುಭವಿಸಿದ್ದು ಅವರು.. ನಮ್ಮ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ, ದುಡಿದು ಬದುಕುವವರಿಗೆ ಅನಾವಶ್ಯಕವಾಗಿ ತೊಂದರೆ ಕೊಟ್ಟರೆ ನಾ ಎಂದಿಗೂ ಸುಮ್ಮನಿರುವುದಿಲ್ಲ. ಅಂತವರ ಜೊತೆ ನಾನು ನಿಲ್ಲುತ್ತೇನೆ..  ಬೇರೆಯವರನ್ನ ನಂಬಿಕೊಂಡು ನಾನು ರಾಜಕೀಯ ಮಾಡುತ್ತಿಲ್ಲ.. ಜ್ಞಾನೇಂದ್ರರವರ ಕಡೆಯವರೆಲ್ಲ ಹರಿಶ್ಚಂದ್ರನ ಮೊಮಕ್ಕಳ.. ಅವರ್ಯಾರು ತಪ್ಪು ಮಾಡುತ್ತಿಲ್ಲವೇ?  ಟೆಂಡರ್ ಕರೆದು ಮಾಡಿರುವ ಹೈ ಮಾಸ್ಕ್ ಗೆ ಗಲಾಟೆ ಮಾಡುತ್ತಾರೆ.. ಅದೇ ಅಯೋಧ್ಯೆಯಲ್ಲಿ ಹುಂಡಿ ಕಳ್ಳತನವಾದರೂ ಅದರ ಬಗ್ಗೆ ಚಕಾರ ಕೂಡ ಎತ್ತುತ್ತಿಲ್ಲ ಎಂದು ಹೇಳಿದರು..

ಕಡೇಮನೆಯವರೆಗೆ ರಸ್ತೆ ಎಂದು ಬಿಂತ್ಲಾವರೆಗೆ ರಸ್ತೆ ಮಾಡಿಸಿಕೊಂಡಿದ್ದಾರೆ.. ತಮ್ಮ ಜಮೀನಿನ ಜಾಗದವರೆಗೆ ಮಾತ್ರ ರಸ್ತೆ ಮಾಡಿಸಿಕೊಂಡಿದ್ದಾರೆ.  ಬಿಂತ್ಲಾ ಗ್ರಾಮಕ್ಕೆ ಏನೋ ರಸ್ತೆ ಆಗಿರಬಹುದು ಆದರೆ ಇವರ ಜಮೀನು ಅಲ್ಲಿ ಇರದಿದ್ದರೆ ಅಲ್ಲಿಗೆ ಯಾವುದೇ ಕಾರಣಕ್ಕೂ ರಸ್ತೆ ಆಗುತ್ತಾ ಇರಲಿಲ್ಲ.. ಇವರು ಏನೇ ಇದ್ದರು ತಮಗೆ ಅನುಕೂಲ ಆಗಲೂ ಮಾಡಿಕೊಂಡಿದ್ದಾರೆ.. ಗುಡ್ಡೆಕೊಪ್ಪದ ಅವರ ಮನೆ ಎದುರಿನ ರಸ್ತೆ ಇವರು ಶಾಸಕರಾದ ಮೇಲೆ ಮಾಡಿಸಿಕೊಂಡಿದ್ದು.. ಅದು ಅವರ ತೋಟಕ್ಕೆ ಹೋಗುತ್ತದೆ.. ರಸ್ತೆ ಇರುವುದು ಹೊಸ್ಕೆರೆ ಎಂಬ ಗ್ರಾಮಕ್ಕೆ ಆದರೆ ಅದು ಇವರ ತೋಟಕ್ಕಾಗಿ ರಸ್ತೆ ಮಾಡಿಸಿದ್ದು ಎಂದು ಹೇಳಿದರು..

ಸೆ. 7 ರಂದು ಬಿಂತ್ಲಾದಿಂದ ಪಾದಯಾತ್ರೆ ಮಾಡುತ್ತಿದ್ದೇನೆ.. ನವೆಂಬರ್ 16 ಕ್ಕೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ.. ಕಸ್ತೂರಿ ರಂಗನ್ ವರದಿ ವಿರುದ್ಧ ಮತ್ತು ತೀರ್ಥಹಳ್ಳಿಯ ಬಗರ್ ಹುಕ್ಕುಂ ಸಾಗುವಳಿದಾರರು ಯಾರೆಲ್ಲ ಇದ್ದಾರೆ ಅವರನ್ನು ಒಕ್ಕಲೆಬ್ಬಿಸಬಾರದು ಎಂಬುದಕ್ಕಾಗಿ ಈ ಪಾದಯಾತ್ರೆ.. ಬಿಜೆಪಿ ಅಥವಾ ಕಾಂಗ್ರೆಸ್ ಯಾರೇ ಆಗಿರಲಿ ಆದರೆ ಈ ವಿಚಾರದಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದರು..

ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಪೂರ್ಣೇಶ್ ಕೆಳಕೆರೆ, ಆದರ್ಶ ಹುಂಚದಕಟ್ಟೆ, ಗೀತಾ ರಮೇಶ್, ಶ್ರೇಯಸ್, ಜೈಕರ್ ಶೆಟ್ಟಿ, ವಿಲಿಯಮ್ ಮಾರ್ಟೀಸ್ ಸೇರಿ ಹಲವರು ಉಪಸ್ಥಿತರಿದ್ದರು..
Previous Post Next Post