ಶಿವಮೊಗ್ಗದಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಮುಸಿಯನ ಸೆರೆ ! Shivamogga

ಶಿವಮೊಗ್ಗದಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಮುಸಿಯನ ಸೆರೆ !

ಶಿವಮೊಗ್ಗ: ನಗರದ ಹಲವು ಭಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುವುದಲ್ಲದೆ,  ದಾಳಿ ನಡೆಸುತ್ತಿದ್ದ ಮುಸಿಯನ (ಲಂಗೂರ್)  ಕೊನೆಗೂ ಸೆರೆ ಹಿಡಿಯಲಾಗಿದೆ..

ಇತ್ತೀಚಿಗೆ ಕಾಶಿಪುರ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಭೀಕರ ದಾಳಿ ನಡೆಸಿ ಗಾಯಗೊಳಿಸಿದ್ದ ಮುಸಿಯ, ಅನಂತರ ಹರಕೆರೆ ಸಮೀಪ ಗಣೇಶ್ ಎಂಬುವವರ ಮೇಲೆ ಏಕಾಏಕಿ ಎರಗಿ ದಾಳಿ ನಡೆಸಿತ್ತು.. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಪಶು ವೈದ್ಯರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೊನೆಗೂ ಮುಸಿಯನನ್ನು ಸೆರೆ ಹಿಡಿದಿದ್ದಾರೆ..

ಸಾರ್ವಜನಿಕರಿಗೆ ಸಿಂಹಸ್ವಪ್ನವಾಗಿದ್ದ ಮುಸಿಯನನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದ್ದು ಇದರಿಂದ ಕಾಶಿಪುರ ಹಾಗೂ ಹರಕೆರೆ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಹಿಡಿದ ಮುಸಿಯನನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
Previous Post Next Post