ಛತ್ರಕೇರಿ ಶ್ರೀ ಸಿದ್ದಿವಿನಾಯಕ ಯುವಕ ಸಂಘದ 43 ನೇ ವರ್ಷದ ಗಣೇಶೋತ್ಸವ - ಎಷ್ಟು ದಿನ- ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?
ತೀರ್ಥಹಳ್ಳಿ : ಪಟ್ಟಣದ ಅತ್ಯಂತ ವೈಭವದ ಗಣೇಶೋತ್ಸವದಲ್ಲಿ ಒಂದಾಗಿರುವ, ಅಧಿಕಾರಿಗಳ ಮೆಚ್ಚಿನ ಗಣಪತಿ ಆಗಿರುವ ಛತ್ರಕೇರಿಯ ಶ್ರೀ ಸಿದ್ದಿವಿನಾಯಕ ಯುವಕ ಸಂಘದ ವತಿಯಿಂದ ಈ ಬಾರಿ 43 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸೆಪ್ಟೆಂಬರ್ 14 ರಿಂದ ಸೆ.28 ರವರೆಗೆ 15 ದಿನಗಳ ಪರ್ಯಂತ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ ಏನೇನು..!?
ದಿನಾಂಕ-14 /9 /26 ಸೋಮವಾರ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ
20/9/26 ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
21/9/26 ಸೋಮವಾರ ಸಂಜೆ 7 ಕ್ಕೆ ಮಜಾಭಾರತ, ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್, ಉಡುಪಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು, ಚಲನಚಿತ್ರನಟರಾದ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ತಂಡದಿಂದ ಕಾಮಿಡಿ ಟಾನಿಕ್ ಹಾಸ್ಯ ನಾಟಕ ಕಾರ್ಯಕ್ರಮ ನಡೆಯಲಿದೆ.
22/9/26 ಮಂಗಳವಾರ ಸಂಜೆ 7 ಕ್ಕೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇವರಿಂದ
ಕಾಂತರ ಮಣಿ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
23/9/26 ಬುಧವಾರ ಸಂಜೆ 7 ಕ್ಕೆ ಸ್ಥಳೀಯರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
27/9/26 ಭಾನುವಾರ ಬೆಳಗ್ಗೆ 10 ಗಂಟೆಗೆ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉಡುಪಿ ಹಾಗೂ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ನಡೆಯಲಿದೆ.. ಹಾಗೂ ಇದೆ ದಿನ 12 ಗಂಟೆಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಗಣ ಹೋಮ ಸಂಪನ್ನಗೊಳ್ಳಲಿದೆ..
28/9/26 ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿವಿಧ ವೇಷಭೂಷಣಗಳಿಂದ, ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ತುಂಗಾ ನದಿಯಲ್ಲಿ ಶ್ರೀ ಸ್ವಾಮಿಯ ವಿಸರ್ಜನೆ ನಡೆಯಲಿದೆ..
ಈ ಎಲ್ಲಾ ದೇವತಾ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತನು - ಮನ - ಧನ ಸಹಕಾರವನ್ನು ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಸಿದ್ಧಿವಿನಾಯಕ ಯುವಕ ಸಂಘ, ಛತ್ರಕೇರಿಯವರು ಮನವಿ ಮಾಡಿದ್ದಾರೆ..
Tags:
ಗಣೇಶೋತ್ಸವ