ನೇಪಾಳ ಪ್ರವಾಸದಲ್ಲಿದ್ದ ಶಿವಮೊಗ್ಗದ ಆರು ಮಂದಿ ಪ್ರವಾಸಿಗರು ಸುರಕ್ಷಿತ..! Nepala Trip

ನೇಪಾಳ ಪ್ರವಾಸದಲ್ಲಿದ್ದ ಶಿವಮೊಗ್ಗದ ಆರು ಮಂದಿ ಪ್ರವಾಸಿಗರು ಸುರಕ್ಷಿತ..!

ಶಿವಮೊಗ್ಗ : ನೇಪಾಳದಲ್ಲಿ ಸದ್ಯ ಆಗಿರುವ ಭಾರಿ ಪ್ರವಾಹದಲ್ಲಿ ಕರ್ನಾಟಕದ ಹಲವರು ಇದ್ದು ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಆರು ಮಂದಿ ಪ್ರವಾಸಕ್ಕಾಗಿ ತೆರಳಿದ್ದು ಪ್ರವಾಸದಲ್ಲಿದ್ದ ಶಿವಮೊಗ್ಗದ ಆರು ಮಂದಿ ಪ್ರವಾಸಿಗರು ಸಹ ಸುರಕ್ಷಿತವಾಗಿ ಇರುವುದಾಗಿ ತಿಳಿದು ಬಂದಿದೆ..

ಶಿವಮೊಗ್ಗದ ಇಬ್ಬರು, ಭದ್ರಾವತಿಯ ಇಬ್ಬರು ಹಾಗೂ ಹೊಸನಗರದ ಇಬ್ಬರು ಪ್ರವಾಸಿಗರು ಪ್ರವಾಸಕ್ಕಾಗಿ ಹೋಗಿದ್ದರು.. ಈಗ  ಭಾರತದ ಗಡಿ ಸನಿಹ ಬಂದು ನಿಟ್ಟಿಸಿರು ಬಿಟ್ಟಿದ್ದಾರೆ.. ಮೂರು ದಿನಗಳ ಕಾಲದ ಪ್ರವಾಸವನ್ನ ಮುಟಕುಗೊಳಿಸಿ ಭಾರತಕ್ಕೆ ವಾಪಸ್ ಆಗುತ್ತಿರುವುದಾಗಿ ಶಿವಮೊಗ್ಗದ ಪ್ರವಾಸಿಗರು
ತಿಳಿಸಿದ್ದಾರೆ..  ಸದ್ಯ ಲುಂಬಿಣಿವನದಲ್ಲಿ ಪ್ರವಾಸಿಗರು ಇದ್ದು 
ಇವರ ಜೊತೆ ಬಂದಿದ್ದ ಒಟ್ಟು 54 ಪ್ರವಾಸಿಗರು ಕೂಡ ಸುರಕ್ಷಿತವಾಗಿ ಇದ್ದಾರೆ ಎಂಬುದಾಗಿ ತಿಳಿಸಿದ್ದಾರೆ..

ನಾವು ಸುರಕ್ಷಿತವಾಗಿ ಇದ್ದೇವೆ ಎಂದು ವಿಡಿಯೋ ಮೂಲಕ  ಶಿವಮೊಗ್ಗದ ಪ್ರವಾಸಿಗರು ಮಾಹಿತಿ ನೀಡಿದ್ದಾರೆ..
Previous Post Next Post