ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿಧನ - ಆರಗ ಜ್ಞಾನೇಂದ್ರ ಸಂತಾಪ Araga jnanendra

ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿಧನ - ಆರಗ ಜ್ಞಾನೇಂದ್ರ ಸಂತಾಪ 

ತೀರ್ಥಹಳ್ಳಿ :  ಮಾಜಿ ಶಾಸಕರು ಹಾಗೂ ಮಾಜಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ ಅವರು ನಿನ್ನೆಯ ದಿನ ದಿವಂಗತರಾಗಿದ್ದಾರೆ.. ತುಂಬಾ ನೋವಾಯಿತು, ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ ಅವರು, ಅವರು ಶಿಕ್ಷಣ ಸಚಿವರಾಗಿದ್ದಾಗ ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ್ದೆ. ಎರಡು ಇಲಾಖೆಗಳ ಸಮಸ್ಯೆಗಳನ್ನ ಒಟ್ಟೊಟ್ಟಿಗೆ ಕುಳಿತು ಮಾತನಾಡಿದ್ದೇವೆ. ನಾಗೇಶ್ ಓರ್ವ ಯಶಸ್ವಿ ಶಿಕ್ಷಣ ಸಚಿವ ಎಂದು ಮಾಜಿ ಗೃಹ ಸಚಿವ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು..

ಅತ್ಯಂತ ಸರಳ ವ್ಯಕ್ತಿತ್ವದ ನಾಗೇಶ್ ಅವರು ತೀರಿಹೋಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.. ತಿಪಟೂರಿನ ಜನರ ಮನ ಗೆದ್ದು ಎರಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕೆಲಸ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಜ್ಞಾನೇಂದ್ರ ತಿಳಿಸಿದರು..
 
Previous Post Next Post