ತೀರ್ಥಹಳ್ಳಿಯ ಮತ ಪರಿಷ್ಕರಣೆಯಲ್ಲಿ 14 ಸಾವಿರ ಮತಗಳು ಹೊರಕ್ಕೆ..!
ತೀರ್ಥಹಳ್ಳಿ : ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದಂತ ಮತ ಪರಿಷ್ಕರಣೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿಯೇ ಸರಿ ಸುಮಾರು 14 ಸಾವಿರ ಮತಗಳು ಮತದಾರರ ಪಟ್ಟಿಯಿಂದ ಹೊರಗುಳಿದಿರುವುದಾಗಿ ತೀರ್ಥಹಳ್ಳಿ ತಾಲೂಕು ಕಚೇರಿ ಮೂಲದಿಂದ ತಿಳಿಸಲಾಗಿದೆ ..
ಮತ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 14 ಸಾವಿರ ಮತಗಳು ಮತದಾರರ ಪಟ್ಟಿಯಿಂದ ಹೊರಗುಳಿದಿರುವುದಾಗಿ ತಿಳಿಸಲಾಗಿದೆ.. ತಾಲೂಕಿನಲ್ಲಿ ಒಟ್ಟು 1,92, 314 ಮತಗಳು ಇಲ್ಲಿಯವರೆಗೆ ಇದ್ದವು. ಈಗ ಮತ ಪರಿಷ್ಕರಣೆ ನಂತರ 1,77, 677 ಕ್ಕೆ ಬಂದಿದ್ದು 14,637 ಮತಗಳು ಹೊರಗುಳಿದಿವೆ.. ಇದರಲ್ಲಿ 6,293 ಮಂದಿಯನ್ನು ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. ಉಳಿದ 8,344 ಮಂದಿ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ.
ಪ್ರತಿಯೊಂದು ಮನೆಗೂ ಬಿ ಎಲ್ ಓ ಗಳು ಭೇಟಿ ನೀಡಿದ್ದರೂ ಸಹ ಕೆಲವರು ಊರು ಬಿಟ್ಟಿರುವುದು, ಇನ್ನು ಕೆಲವರ ಬಗ್ಗೆ ಮಾಹಿತಿಯೇ ಇಲ್ಲ ಎನ್ನಲಾಗಿದೆ.. ಈಗ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ ಮತದಾರರ ಪಟ್ಟಿಗೆ ಸೇರಿಸಲು ಕಡೆಯ ಅವಕಾಶ ಇದ್ದು ಫಾರಂ 6 ತುಂಬಿಸಿ ಪಟ್ಟಿಗೆ ಸೇರಿಸ ಬಹುದಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ..
Tags:
ತೀರ್ಥಹಳ್ಳಿ ಸುದ್ದಿ