ಕಸ್ತೂರಿ ರಂಗನ್ ವರದಿ ವಿರೋಧಿಸಿ ಶನಿವಾರ ಆರ್ ಎಂ ಮಂಜುನಾಥ ಗೌಡ ಪಾದಯಾತ್ರೆ..! RMM

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶನಿವಾರ ಆರ್ ಎಂ ಮಂಜುನಾಥ ಗೌಡ ಪಾದಯಾತ್ರೆ..!

ಹೊಸನಗರ :  ಕಸ್ತೂರಿ ರಂಗನ್ ವರದಿಯ ಅನುಸಾರ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಮಲೆನಾಡಿನ 1449 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಸಲುವಾಗಿ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿರುವುದರ ವಿರುದ್ಧವಾಗಿ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ..

29-08-2026 ರ ಶನಿವಾರ ಬೆಳಗ್ಗೆ 9 ಗಂಟೆಗೆ ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ, ಶಿವಮೊಗ್ಗ ಜಿಲ್ಲಾ ವತಿಯಿಂದ ಹೊಸನಗರ ತಾಲೂಕಿನ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಕಾರ್ಗಡಿಯಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅನಂತರ ಹೊಸನಗರದಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ. 

ಈ ಹೋರಾಟಕ್ಕೆ ಎಲ್ಲಾ  ರೈತ ಸಹಕಾರಿ ಸಂಘಗಳ ಪದಾಧಿಕಾರಿಗಳು, ರೈತ ಬಾಂಧವರು, ಬಗರ್ ಹುಕುಂ ರೈತರು, ವಿವಿಧ ಸಂಘ, ಸಂಸ್ಥೆಯ, ಸಂಘಟನೆಯ ನೇತಾರರು, ಪದಾಧಿಕಾರಿಗಳು,  ಪಕ್ಷಾತೀತವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿದೆ..
Previous Post Next Post